ಬೆಂಗಳೂರು : ಅತಿ ವೇಗವಾಗಿ ಓಡುತ್ತಿರುವ ಬ್ಯುಸಿ ಲೈಫ್ನಲ್ಲಿ ಜಂಕ್ ಫುಡ್, ಬರ್ಗರ್, ಪಿಜ್ಜಾ, ಚಿಪ್ಸ್ ದಂತಹ ರೆಡಿಮೇಡ್ ಆಹಾರಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂತಹ ಕಳಪೆ ಜೀವನಶೈಲಿಯಿಂದಾಗಿ ಕಾಯಿಲೆಗಳನ್ನು ನಾವು ಸುಲಭವಾಗಿ ಬರಮಾಡಿಕೊಳ್ಳಬಹುದು.. ಇದರಿಂದ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಈ ಆಹಾರದಿಂದ ಕಡಿಮೆ ಮಾಡಿಕೊಳ್ಳಬಹುದು ಅವುಗಳ ಬಗ್ಗೆ ನಾವ್ ತಿಳಿಸ್ತೀವಿ ಮಿಸ್ ಮಾಡದೇ ಈ ಸ್ಟೋರಿ ಓದಿ…
ನಿಂಬೆ ಹಣ್ಣು : ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಥೇಚ್ಚವಾಗಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ನಿಂಬೆ ಹಣ್ಣು ದೇಹದ ವಿಷವನ್ನು ಹೊರಹಾಕಲು ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ನಿಯಮಿತವಾಗಿ ನಿಂಬೆ ಹಣ್ಣನ್ನು ಬಳಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್, ಆಂಟಿ ಆಕ್ಸಿಡೆಂಟ್ ಫ್ಲೇವೊನ್‌ಗಳು ಮತ್ತು ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.
ಬೆಟ್ಟದ ನೆಲ್ಲಿಕಾಯಿ : ಬೆಟ್ಟದ ನೆಲ್ಲಿಕಾಯಿ ನಾಲಿಗೆಗೆ ವಿಭಿನ್ನವಾದ ರುಚಿಯನ್ನು ನೀಡಿ, ಮತ್ತೆ ಸಿಹಿಯ ಅನುಭವವನ್ನು ನೀಡುತ್ತೆ. ಅದೇ ರೀತಿ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದು ಮಧುಮೇಹ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಅತ್ಯುತ್ತಮವಾಗಿದೆ. ಇದು ವಿಟಮಿನ್ ಸಿ, ಖನಿಜಗಳು ಮತ್ತು ಅಮೈನೋ ಆಮ್ಲಗಳ ಶ್ರೀಮಂತ ಮೂಲಗಳನ್ನು ಹೊಂದಿದೆ. ಕೆಲವು ಅಧ್ಯಯನಗಳ ಪ್ರಕಾರ, ನೆಲ್ಲಿಕಾಯಿಯು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಗ್ರೀನ್ ಟೀ : ಗ್ರೀನ್ ಟೀ ಪಾಲಿಫಿನಾಲ್‌ಗಳ ಸಮೃದ್ಧ ಮೂಲವನ್ನು ಹೊಂದಿದೆ. ಗ್ರೀನ್ ಟೀ ತೂಕವನ್ನು ನಿರ್ವಹಣೆ ಮಾಡುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮಧುಮೇಹ ಹೊಂದಿರುವವರಿಗೆ ಗ್ರೀನ್ ಟೀ ಬಹಳ ಉತ್ತಮವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಮ್ ಹೆಚ್ಚಾಗಿದ್ದು, ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
ಬೀನ್ಸ್: ಬೀನ್ಸ್ ಪೌಷ್ಟಿಕಾಂಶ ಭರಿತವಾಗಿದೆ. ಬೀನ್ಸ್ ತೂಕ ನಷ್ಟಕ್ಕೆ, ಕೆಟ್ಟ ಕೊಲೆಸ್ಟ್ರಾಲ್‌ಗೆ ಚಿಕಿತ್ಸೆ ನೀಡಲು ಬಹಳ ಪ್ರಯೋಜನಕಾರಿಯಾಗಿದೆ. ಇದು ವಿಶೇಷವಾಗಿ ಕರಗುವ ಫೈಬರ್‌ನಿಂದ ಸಮೃದ್ಧವಾಗಿದೆ. ಫೈಬರ್‌ನಿಂದ ಕೂಡಿರುವ ಬೀನ್ಸ್ ಅನ್ನು ಸೇವನೆ ಮಾಡುವುದರಿಂದ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಇದರ ಪರಿಣಾಮ ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆಯನ್ನು ತಗ್ಗಿಸುತ್ತದೆ.
ಓಟ್ಸ್ : ಓಟ್ಸ್ ತೂಕ ಕಮ್ಮಿ ಮಾಡುವವರ ನೆಚ್ಚಿನ ಆಹಾರವಾಗಿದೆ. ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು ಪ್ರತಿನಿತ್ಯ ನಿಯಮಿತವಾಗಿ ಓಟ್ಸ್ನ್ನು ಸೇವನೆ ಮಾಡಬಹುದು. ರುಚಿಗೆ ತಾಜಾ ಬಾಳೆಹಣ್ಣು, ಕೆಲವು ಸ್ಟ್ರಾಬೆರಿಗಳನ್ನು ಮಿಶ್ರಣ ಮಾಡಿ ಸೇವನೆ ಮಾಡಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.
