ಬೆಂಗಳೂರು: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಅಲರ್ಟ್ ಆಗಿರುವಂತೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಸೂಚನೆ ನೀಡಿದ್ದಾರೆ. ಇದೇ ವೇಳೆ ಯಾವುದೇ ಸಂದರ್ಭವನ್ನು ಎದುರಿಸಲು ಅಲರ್ಟ್ ಆಗಿರುವಂತೆ ಮತ್ತು ಅಗತ್ಯ ಬಂದೋಬಸ್ತ್ ಕೈಗೊಳ್ಳುವಂತೆ ರಾಜ್ಯದ ಕಾನೂನು & ಸುವ್ಯವಸ್ಥೆಯ ADGP ಅಲೋಕ್ ಕುಮಾರ್ ಅವರು ಎಲ್ಲಾ ಜಿಲ್ಲೆಗಳ ಎಸ್ ಪಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ದೇಶದ ಹಲವೆಡೆ ಭಾರೀ ಪ್ರೊಟೆಸ್ಟ್… ಅಲ್ಲಲ್ಲಿ ಬೆಂಕಿ ಹಚ್ಚಿ ಹೋರಾಟಗಾರರ ಕಿಚ್ಚು…
ಬೆಂಗಳೂರಲ್ಲೂ ಪೊಲೀಸರು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡಬೇಕು, ಹೊಯ್ಸಳ ಹಾಗೂ ಚೀತಾ ವಾಹನ ಮೂಲಕ ರೌಂಡ್ಸ್ ಮಾಡಬೇಕು. ಗುಂಪು ಸೇರೋ ಪ್ರದೇಶಗಳಲ್ಲಿ ಇನ್ಸ್ಪೆಕ್ಟರ್ ಗಳು ಕಟ್ಟೆಚ್ಚರ ವಹಿಸಬೇಕು, ಅನಾವಶ್ಯಕವಾಗಿ ಗುಂಪು ಸೇರದಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕೋಲಾರ MLA ಶ್ರೀನಿವಾಸ ಗೌಡ ನಿವಾಸದ ಬಳಿJDS ಕಾರ್ಯಕರ್ತರು ಪ್ರೊಟೆಸ್ಟ್… ಪಕ್ಷಕ್ಕೆ ದ್ರೋಹವೆಸಗಿದ್ದಾರೆಂದು ಆಕ್ರೋಶ…