ಬೆಂಗಳೂರು : ಖತರ್ನಾಕ್ ಕಿರಾತಕ ಸ್ಯಾಂಟ್ರೋ ರವಿಗೆ CID ಡ್ರಿಲ್ ನಡೆಸಲಾಗುತ್ತಿದ್ದು, ಸಿಐಡಿ ತಂಡ ಪಿನ್ ಟು ಪಿನ್ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ರವಿಗೆ ಮತ್ತೆ ಮೆಡಿಕಲ್ ಟೆಸ್ಟ್ಗೆ ಒಳಪಡಿಸಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿಗೆ ಟೆಸ್ಟಿಂಗ್ ನಡೆಸುತ್ತಿದ್ದಾರೆ. ಪೊಲೀಸರು ಟೆಸ್ಟ್ ಬಳಿಕ CID ಕಚೇರಿಗೆ ಕರೆದೊಯ್ಯತ್ತಾರೆ. ವರ್ಗಾವಣೆ, ಪಿಂಪ್ ಬ್ಯುಸಿನೆಸ್ ಸಂಬಂಧ CID ವಿಚಾರಣೆ ನಡೆಸುತ್ತಾರೆ. CID ಸ್ಯಾಂಟ್ರೋ ರವಿಯಿಂದ ಕಂಪ್ಲೀಟ್ ಮಾಹಿತಿ ಪಡೆಯುತ್ತಿದ್ದಾರೆ. ಪೊಲೀಸರು ಕೇಸಲ್ಲಿ ಯಾರಿದ್ದಾರೆಂದು ಮಾಹಿತಿ ಕಲೆಹಾಕುತ್ತಿದ್ದಾರೆ.
ಹೈಟೆಕ್ ಪಿಂಪ್ ಸ್ಯಾಂಟ್ರೋ ರವಿ ಕೇಸ್ ತನಿಖೆ ಚುರುಕಾಗಿದೆ. CID ಮುಂದೆ ಸ್ಯಾಂಟ್ರೋ ರವಿ ಪತ್ನಿ ವಿಚಾರಣೆಗೆ ಹಾಜರಾಗಿದ್ದಾರೆ. CID DySP ನರಸಿಂಹಮೂರ್ತಿ ಮುಂದೆ ಸಂತ್ರಸ್ತೆ ಹಾಜರಾಗಿದ್ದಾರೆ. ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲಿದ್ದಾರೆ. CID ಸಂತ್ರಸ್ತೆ ಹೇಳಿಕೆ ಬಳಿಕ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಹಾಜರಿಂದ ಹಲವು ಮಾಹಿತಿ ಲಭ್ಯ ಸಾಧ್ಯತೆಗಳಿವೆ.
ಸಿಐಡಿ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಲಿದ್ದಾರೆ. ಸ್ಯಾಂಟ್ರೋ ಪತ್ನಿಯ ಹೇಳಿಕೆಯನ್ನ ಲಿಖಿತ ರೂಪದಲ್ಲಿ ಪಡೆಯುತ್ತಾರೆ. ಮಹಿಳಾ ಅಧಿಕಾರಿಯಿಂದ ಸ್ಯಾಂಟ್ರೋ ರವಿ ಪತ್ನಿಯ ವಿಚಾರಣೆ ನಡೆಸಲಾಗುತ್ತದೆ. ಮಹಿಳಾ ತಂಡ ವಿಚಾರಣೆ ಮೂಲಕ ಪತ್ನಿಯ ಹೇಳಿಕೆ ಪಡೆಯಲಿದ್ದಾರೆ. ವಿಚಾರಣೆ ಬಳಿಕ ಶೇಷಾದ್ರಿಪುರಂ ಬಳಿ ವಾಸವಿದ್ದ ಫ್ಲ್ಯಾಟ್ಗೆ ಮಹಜರು ಮಾಡಲಾಗುತ್ತದೆ. ಬಸವನಗುಡಿಯಲ್ಲಿರೋ ಮನೆಗೂ ಸಂತ್ರಸ್ತೆಯನ್ನ ಕರೆದೊಯ್ಯಲಾಗುತ್ತೆ , ಗರ್ಭಪಾತ ನಡೆದಿದೆ ಎನ್ನಲಾದ ಆಸ್ಪತ್ರೆಗೂ ಕರೆದೊಯ್ಯುವ ಸಾಧ್ಯತೆಗಳಿವೆ.
ಇದನ್ನೂ ಓದಿ : ರಾಜಾನುಕುಂಟೆ ಯುವತಿ ರಾಶಿಯನ್ನ ಕೊಲೆಗೈದ ಪ್ರಕರಣ… ಯುವತಿ ಸಾವಿನ ಕಿಚ್ಚಿನ ಜ್ವಾಲೆಯಾಗಿ ಆರೋಪಿ ಮನೆಗೆ ಕಲ್ಲು…