ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ? ವಸತಿರಹಿತರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ? ನಿಮಗೆ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಹೊಂದುವ ಕನಸಿದೆಯೇ? ಹಾಗಾದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ. ರಾಜ್ಯ ಸರ್ಕಾರ ವಸತಿ ರಹಿತರಿಗಾಗಿ ಮನೆ ನಿರ್ಮಿಸಿ ಕೊಡುತ್ತಿದ್ದು, ಆ ಮನೆಗಳನ್ನು ನೀವೂ ತಮ್ಮದಾಗಿಸಿಕೊಳ್ಳಬಹುದು. ಇದರ ಫುಲ್ ಡೀಟೇಲ್ಸ್ ಇಲ್ಲಿದೆ.
ವಸತಿ ಇಲಾಖೆಯಿಂದ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿಯಲ್ಲಿ 1 BHK ಮನೆ/ ಫ್ಲ್ಯಾಟ್ ಗಳನ್ನು ನಿರ್ಮಿಸುತ್ತಿದ್ದು. ಮನೆ ಮತ್ತು ಫ್ಲ್ಯಾಟ್ ಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ದಿನಾಂಕ 23-08-2021 ರಿಂದ ದಿನಾಂಕ 21-09-2021 ರವರೆಗೆ ಅರ್ಜಿ ಸಲ್ಲಿಸಬಹುದು. ವಸತಿ ಇಲಾಖೆಯ ಈ ಸದಾವಕಾಶದಿಂದ ವಂಚಿತರಾಗದಿರಲು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಎಂದು ವಸತಿ ಸಚಿವ ವಿ ಸೋಮಣ್ಣ ಅವರು ಮನವಿ ಮಾಡಿದ್ದಾರೆ.
ವಸತಿ ಇಲಾಖೆಯಿಂದ 'ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಯಡಿಯಲ್ಲಿ 1 BHK ಮನೆ/ ಫ್ಲ್ಯಾಟ್ ಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ದಿನಾಂಕ 23-08-2021 ರಿಂದ ದಿನಾಂಕ 21-09-2021 ರವರೆಗೆ ಅರ್ಜಿ ಸಲ್ಲಿಸಬಹುದು. ವಸತಿ ಇಲಾಖೆಯ ಈ ಸದಾವಕಾಶದಿಂದ ವಂಚಿತರಾಗದಿರಲು ಸಕಾಲದಲ್ಲಿ ಅರ್ಜಿ ಸಲ್ಲಿಸಿ. pic.twitter.com/5ySwOEYIcK
— V. Somanna (@VSOMANNA_BJP) August 20, 2021
ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 1014 ಎಕರೆ 10 ಗುಂಟೆ ಪ್ರದೇಶದಲ್ಲಿ ಸಮಗ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 46,499 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ 53,501 ಮನೆಗಳನ್ನು ನಿರ್ಮಿಸಲು 464 ಎಕರೆ ಜಮೀನನ್ನು ಗುರುತಿಸಿದ್ದು, ಈ ಪೈಕಿ 100 ಎಕರೆ ಜಮೀನಿನಲ್ಲಿ 10,000 ಮನೆಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ವಸತಿ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.