ನವದೆಹಲಿ: ಭಾರತದ ಹೆಮ್ಮೆಯ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಎದ್ದು ಕಾಣುವ ಕಟ್ಟಡ ಸಂಸತ್ ಭವನ. ದೇಶದ ಪ್ರಮುಖ ಹೆಗ್ಗುರುತುಗಳಲ್ಲಿ ಇದೂ ಒಂದು. ಇದೀಗ ನೂತನ ಸಂಸತ್ ಭವನದ ನಿರ್ಮಾಣ ಮಾಡಲಾಗಿದ್ದು, ಬಹುತೇಕ ಕಾಮಗಾರಿ ಮುಗಿದಿದೆ. ಮುಂದಿನ ಎರಡು ತಿಂಗಳಲ್ಲಿ ಉದ್ಘಾಟನೆ ಮಾಡುವ ಸಾಧ್ಯತೆಗಳಿದೆ.
ಈಗಾಗಲೇ ಲೋಕಸಭೆ, ರಾಜ್ಯಸಭೆಯ ಸೀಟು ವ್ಯವಸ್ಥೆ ಪೂರ್ಣಗೊಂಡಿದ್ದು, ಲೋಕಸಭಾ ಹಾಲ್ನಲ್ಲಿ 888 ಆಸನದ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ರಾಜ್ಯಸಭೆಯಲ್ಲಿ 384 ಆಸನದ ಸಾಮರ್ಥ್ಯದ ಹಾಲ್ ನಿರ್ಮಾಣ ಮಾಡಲಾಗಿದೆ. 65 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರ ಹೊಸ ಲೋಕಸಭೆಯ ಹಾಲ್, ರಾಜ್ಯಸಭೆಯ ಹಾಲ್ ಫೋಟೋ ಬಿಡುಗಡೆ ಮಾಡಿದೆ.