ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆ ಅಬ್ಬರಿಸಿದ್ದು, ಬಿರುಗಾಳಿ ಹೊಡೆತಕ್ಕೆ ಮರ, ಕಂಬಬಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ,ಕೋಲಾರದಲ್ಲಿ ಅಪಾರ ಬೆಳೆ ಹಾನಿಯಾಗಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆಯ ಅಬ್ಬರ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ದೇಸಾಯಿ ಕ್ರಾಸ್ ಬಳಿ ಆಟೋದಲ್ಲಿ ಚಲಿಸುತ್ತಿದ್ದಾಗ ಮರ ಬಿದ್ದು ಇಬ್ಬರು ಸಾವನಪ್ಪಿದ್ದಾರೆ. ಕೋಲಾರದಲ್ಲೂ ಸಿಡಿಲು ಸಹಿತ ಮಳೆಯಿಂದಾಗಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಿಡಿಲಿಗೆ ತಾಯಿ-ಮಗು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಇದನ್ನೂ ಓದಿ:ಆರೋಪ ಮಾಡಿದ ಮೇಲೆ ರಾಜೀನಾಮೆ ಕೊಡಕ್ಕೆ ಆಗಲ್ಲ…! PSI ಅಕ್ರಮ ಕೇಸ್ ಸಂಬಂಧ ಆರಗ ಪರ ಯತ್ನಾಳ್ ಬ್ಯಾಟ್..!