ಡೆಹ್ರಾಡೂನ್: ಉತ್ತರಾಖಂಡದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು. ದೇವಭೂಮಿಯಲ್ಲಿ ಮೇಘಸ್ಫೋಟಕ್ಕೆ ಜಲ ಪ್ರಳಯವಾಗಿದೆ. ಸತತ 40 ಗಂಟೆಗಳ ಕಾಲ ಸುರಿದ ಮಹಾಮಳೆಗೆ 20ಕ್ಕೂ ಹೆಚ್ಚು ಬಲಿಯಾಗಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿಗಳು ಬಂದ್ ಆಗಿವೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಪೊಲೀಸ್ ಜೀಪ್ ಮೇಲೆ ಬಿದ್ದ ಬೃಹತ್ ಮರ… ಇಬ್ಬರು ಪೊಲೀಸರಿಗೆ ಗಾಯ…
ಮೇಘಸ್ಪೋಟಕ್ಕೆ ಉತ್ತರಾಖಂಡ ತತ್ತರಿಸಿ ಹೋಗಿದೆ. ಸತತ 40 ಗಂಟೆಗಳ ಕಾಲ ಸುರಿದ ಮಹಾಮಳೆ ರಸ್ತೆ, ಸೇತುವೆಗಳನ್ನು ಕೊಚ್ಚಿಹಾಕಿದೆ. ಭೂಕುಸಿತ ಉಂಟಾಗಿದ್ದು ಹೆದ್ದಾರಿಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ. ರಸ್ತೆಗಳಲ್ಲಿ ನಿಲ್ಲಿಸಿರೋ ವಾಹನಗಳು ಮಳೆ ನೀರಿನಲ್ಲಿ ಮುಳುಗಿವೆ. 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಅತಂತ್ರರಾಗಿದ್ದಾರೆ. ನೈನಿತಾಲ್, ಚಮೋಲಿ, ತೆಹ್ರಿ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ಕೋಸಿ, ಗೌಲ, ಮಂದಾಕಿನಿ ನದಿಗಳು ಉಕ್ಕಿ ಹರಿದು ಭಾರೀ ಪ್ರವಾಹ ಸೃಷ್ಟಿಯಾಗಿದೆ. ಚಾರ್ ಧಾಮ್ ಯಾತ್ರೆ ತಾತ್ಕಾಲಿತ ರದ್ದಾಗಿದೆ.
ಇದನ್ನೂ ಓದಿ: ರಾಘವೇಂದ್ರ ರಾಜ್ಕುಮಾರ್ ಗೆ ಜೀವಮಾನ ಸಾಧನೆ ಪ್ರಶಸ್ತಿ… ಪುನೀತ್ ರಾಜ್ಕುಮಾರ್ ಹೇಳಿದ್ದೇನು ಗೊತ್ತಾ..?
ಜಲಪ್ರಳಯದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿತ ರದ್ದು ಮಾಡಲಾಗಿದೆ. ರಾಮನಗರದ ರೆಸಾರ್ಟ್ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಕೇದಾರನಾಥದಲ್ಲಿ 4,000 ಯಾತ್ರಾರ್ಥಿಗಳು ಮತ್ತು ಬದರಿನಾಥ್ನಲ್ಲಿ 2500 ಯಾತ್ರಾರ್ಥಿಗಳು ಸೇರಿ ಒಟ್ಟು 6500ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆಯಿದೆ.