ಉಡುಪಿ: ನಿನ್ನೆ ರಾಜ್ಯದ್ಯಂತ ಮಳೆ ಅಬ್ಬರಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ತೆಂಗಿನ ಮರ ಮನೆಯ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ.
ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಹ್ಯಾರಾಡು ಎಂಬಲ್ಲಿ ಹೇಮಾ ಮೊಗವೀರ ಎಂಬುವವರ ಮನೆ ಮೇಲೆ ಮರ ಬಿದ್ದು ಮೇಲ್ಛಾವಣಿಗೆ ಹಾನಿಯುಂಟಾಗಿದೆ. ಗಾಳಿಗೆ ಮನೆಯ ಮುಂಭಾಗದ ತೆಂಗಿನ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದ್ದು, ಮರ ಬಿದ್ದ ರಭಸಕ್ಕೆ ಮನೆಯ ಫರ್ನಿಚರ್, ಟಿವಿ ಸೇರಿ ಒಟ್ಟು 1 ಲಕ್ಷ ರೂಪಾಯಿ ನಷ್ಟವುಂಟಾಗಿದೆ.
ಮರ ಬಿದ್ದು ಮನೆಯ ಹೆಂಚು ತಲೆ ಮೇಲೆ ಬಿದ್ದ ಸುಜನ್ ಎಂಬುವವರಿಗೆ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕದ ಮಿಣ್ಕ ಮೊಗವೀರ, ಮಹಾಬಲ ಕುಲಾಲ ಅವರುಗಳು ಮನೆಗೂ ಹಾನಿಯಾಗಿದ್ದು, ಭೋವಿಕಟ್ಟೆ ಬಳಿ ಮರಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಹೆಸ್ಕತ್ತೂರು ಸರಕಾರಿ ಫ್ರೌಢಶಾಲೆಯ ಶೀಟ್ ಮೇಲ್ಛಾವಣಿ ಹಾರಿ ಹೋಗಿ ನಷ್ಟವಾಗಿದ್ದು, ಸ್ಥಳಕ್ಕೆ ಕೊರ್ಗಿ ಪಿಡಿಓ ಸುಧಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ : ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ ರೀ ಓಪನ್..!