ವಿಜಯಪುರ :ವಿಜಯಪುರ ಜಿಲ್ಲೆಯ ತ್ರಿಕೋಟದಲ್ಲೂ ಭಾರೀ ಮಳೆಯಾಗ್ತಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿವೆ.
ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಕಾಲುವೆಗೆ ಹರಿದ ನೀರಿನ ಜೊತೆ ಮಳೆ ನೀರು ಸೇರಿದೆ. ಸಂಗಮನಾಥ ದೇವಾಲಯದ ಆವರಣದ ತುಂಬಾ ನೀರು ಹರಿಯುತ್ತಿದ್ದು, ಮೊಳಕಾಲು ಮಟ್ಟ ನಿಂತಿರುವ ನೀರಿನಲ್ಲೇ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಸಂಗಮನಾಥ ಗರ್ಭ ಗುಡಿಯಲ್ಲೇ ಮೊಳಕಾಲಿನ ವರೆಗೆ ನೀರು ತುಂಬಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆದ ವರುಣನ ರಣಾರ್ಭಟ… ಇನ್ನೂ ಮೂರು ದಿನ ಮುಂದುವರೆಯಲಿದೆ ಮಳೆ…