ಹಳ್ಳದಲ್ಲಿ ರಬಸವಾಗಿ ಹರಿಯುತ್ತಿರುವ ನೀರಿನಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.
ವರುಣನ ಅಬ್ಬರದಿಂದ ಹಳ್ಳಗಳು ಬೋರ್ಗರೆದು ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಚಾಲಕನೋರ್ವ ಟ್ರಾಕ್ಟರ್ ತೆಗೆದುಕೊಂಡೋಗುವ ಸಾಹಾಸ ಮಾಡಿದ್ದಾನೆ. ಡ್ರೈವರ್ನ ಹುಚ್ಚ ಸಾಹಸಕ್ಕೆ ಟ್ರ್ಯಾಕ್ಟರ್ ಈಗ ನೀರು ಪಾಲಾಗಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಮಳೆಯಿಂದ ಹೈರಾಣಾದ ರೈತರು ! ಕೆರೆ ಒಡೆದು ರೈತರ ಬದುಕು ನೀರುಪಾಲು !
ಚಿತ್ರದುರ್ಗ ಜಿ. ಚಳ್ಳಕರೆ ತಾ. ಚಿಗತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ. ಆದರೆ ಅದೃಷ್ಟವಶಾತ್ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ಸುರಿದ ಬಾರೀ ಮಳೆಗೆ ಕೋಟೆನಾಡಿನ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಹಳ್ಳ ತುಂಬಿ ಹರಿಯುತ್ತಿದೆ. ರಾಣಿಕೆರೆಗೆ ಬೃಹತ್ ಪ್ರಮಾಣದ ನೀರು ಹರಿದು ಹೋಗ್ತಿದೆ. ನೀರಿನ ಪ್ರಮಾಣ ಹೆಚ್ಚಾಗಿ ರೈತರ ಜಮೀನುಗಳಿಗೆ ನುಗ್ಗಿದೆ. ಹಳ್ಳದ ನೀರು ನುಗ್ಗಿ ಈರುಳ್ಳಿ ಬೆಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಮಳೆಗೆ ಹಾನಿಯಾಗಿದೆ.