ಮೈಸೂರು: ಕೇರಳ, ಕೊಡಗಿನಲ್ಲಿ ಭಾರೀ ಮಳೆ ಎಫೆಕ್ಟ್ ಹಿನ್ನೆಲೆ KRSಗೆ ಭಾರಿ ಪ್ರಮಾಣದ ನೀರು ಹರಿದು ಬರ್ತಿದೆ. ಡ್ಯಾಂಗೆ 78 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದು, ಡ್ಯಾಂನಿಂದ 80 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
ಭಾರೀ ಪ್ರಮಾಣದಲ್ಲಿ ನೀರು ನದಿಯನ್ನು ಸೇರುತ್ತಿದ್ದು, ಕಾವೇರಿ ನದಿ ದಂಡೆಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ಅಲರ್ಟ್ ನೀಡಲಾಗಿದೆ. ಲಾರ್ಡ್ ವೆಲ್ಲೆಸ್ಲಿ ಸೇತುವೆ ಮುಳುಗಿದ್ದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಅಧಿಕಾರಿಗಳು ಸೂಚಿಸಿದ್ದಾರೆ. ರಂಗನತಿಟ್ಟು, ನಿಮಿಷಾಂಬ ಸೇರಿ ಹಲವೆಡೆ ಜಲಾವೃತಗೊಂಡಿದೆ,