ಮೈಸೂರು: ನರಸೀಪುರ ತಾಲ್ಲೂಕಿನ ಹೋಟೆಲ್ ಗಳಲ್ಲಿ ಆಹಾರ ದಂಧೆ ಶುರುವಾಗಿದ್ದು, ವಾರದ ಹಿಂದೆ ಮಾಡಿದ್ದ ಅಡುಗೆ, ಊಟ ತಿನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನರಸೀಪುರ ಹೋಟೆಲ್ ಗಳಲ್ಲಿ ಊಟ ತಿಂದರೆ ರೋಗ ಗ್ಯಾರಂಟಿಯಾಗಿದ್ದು, ಎಸ್ ಆರ್ ಹೋಟೆಲ್ ಗೆ ಪುರಸಭೆ ಅರೋಗ್ಯಧಿಕಾರಿಗಳ ಅಧಿಕಾರಿಗಳ ದಿಢೀರ್ ಭೇಟಿ ಕೊಟ್ಟಿದ್ದಾರೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಎಸ್ ಆರ್ ಹೋಟೆಲ್ ನಲ್ಲಿ ಹಳೆಯ ಆಹಾರ, ಊಟ, ನೀಡುತ್ತಿರುವುದಾಗಿ ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಇಂದು ಧಿಡೀರ್ ಭೇಟಿ ನೀಡಿದ ಪುರಸಭೆ ಅರೋಗ್ಯಧಿಕಾರಿಗ ಚೇತನ್,ಮಹೇಂದ್ರ, ಹೋಟೆಲ್ ನಲ್ಲಿ ಅಡುಗೆ ತಯಾರು ಮಾಡುವ ಕೋಣೆ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಅಡುಗೆ ಕೋಣೆಯಲ್ಲಿ ಹಲವು ದಿನಗಳ ಹಿಂದೆಯೇ ಮಾಡಿದ್ದ ಆಹಾರ ಪತ್ತೆಯಾಗಿದ್ದು, ಹಳೆಯ ಆಹಾರ ಕಂಡು ದಿಗ್ಬ್ರಮೆಗೊಂಡಿದ್ದಾರೆ. ಹೀಗಾಗಿ ಪುರಸಭೆ ಅಧಿಕಾರಿಗಳು ಎಸ್ ಆರ್ ಹೋಟೆಲ್ ಮಾಲೀಕರಿಗೆ 5 ಸಾವಿರ ದಂಡ ವಿಧಿಸಿದ್ದಾರೆ. ಜನರಿಗೆ ವಿಷಾಹಾರ ನೀಡುವ ಹೋಟೆಲ್ ಮಾಲೀಕರಿಗೆ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: PSI ಅಕ್ರಮ ಕೇಸ್ನಲ್ಲಿ ಆರೋಪಿ ವೈಜನಾಥ್ ಜೈಲಿಗೆ..! ಹೆಂಡ್ತಿ ಜೈಲರ್ ಆಗಿರೋ ಸೆಂಟ್ರಲ್ ಜೈಲಿಗೆ ಶಿಫ್ಟ್..!