ಕೆಜಿಎಫ್2 ಟೀಸರ್ಬಿಡುಗಡೆಯ ನಂತರ ಯಶ್ಗೆ ಆರೋಗ್ಯ ಇಲಾಖೆ ಶಾಕ್ ನೀಡಿದೆ. ಆರೋಗ್ಯ ಇಲಾಖೆಯು ಯಶ್ಗೆ ನೋಟಿಸ್ ಜಾರಿ ಮಾಡಿದ್ದು, ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ದೃಶ್ಯಕ್ಕೆ ಮೋಡಿ ಹೋಗಿದ್ದು ನಿಜ. ಆದರೆ ಇದೇ ದೃಶ್ಯ ಯಶ್ಗೆ ಕಂಟಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಯಾಗಿದೆ.
ಟೀಸರ್ನಲ್ಲಿ ಇರುವ ಸಿಗರೇಟ್ ಸೇದುವ ದೃಶ್ಯವು ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಆರೋಗ್ಯ ಇಲಾಖೆಯು ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003 ಅಡಿಯಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ.
ಸಿಗರೇಟ್ ಮತ್ತು ತಂಬಾಕು ಉತ್ಒನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆ ಆಗಿದೆ. ನಿಮಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದು, ಯುವಜನತೆ ಇಂತಹ ದೃಶ್ಯಗಳನ್ನು ಅನುಸರಿಸುವ ಸಾಧ್ಯತೆಯಿದೆ ಸಿಗರೇಟ್ ಸೇದುವ ದೃಶ್ಯ ತೆಗೆದು ಹಾಕಬೇಕು ಅಂತ ನಟ ಯಶ್ ಗೆ ಆರೋಗ್ಯ ಇಲಾಖೆಯಿಂದ ಜಾರಿಯಾದ ನೋಟೀಸ್ನಲ್ಲಿ ಹೇಳಿದ್ದಾರೆ.