ಬೆಂಗಳೂರು: 4 ವರ್ಷದ ಬಳಿಕ ಮತ್ತೆ ಸಿಡಿ ಕೇಸ್ ಹೊರ ಬಂದಿದ್ದು, CD ಕೇಸ್ ಸಂಬಂಧ ಜಾರಕಿಹೊಳಿ v/s ಡಿಕೆಶಿ ಕದನ ನಡೆದಿದೆ.
ಡಿಕೆಶಿ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ, CD ಕೇಸ್ಗಾಗಿ 40 ಕೋಟಿ ಖರ್ಚು ಮಾಡಿದ್ದಾನೆ, CD ಕೇಸ್ ಬಗ್ಗೆ ಸಿಬಿಐ ತನಿಖೆಗೆ ಅಮಿತ್ ಶಾ ಜೊತೆ ಮಾತಾಡ್ತೇನೆ, ಸಿಬಿಐ ತನಿಖೆ ಆದ್ರೆ ಡಿಕೆಶಿಯ ಬಂಡವಾಳ ಬಯಲಾಗುತ್ತೆ ಎಂದು ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಏಕವಚನದಲ್ಲೇ ಗುಡುಗಿದ್ದಾರೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅವನಿಗೆ ಪ್ಯಾಂಟ್ ಬಿಚ್ಚೋಕ್ಕೆ ನಾನ್ ಹೇಳಿದ್ನಾ ?,
ನಮ್ಮ ಕಾಂಗ್ರೆಸ್ ಪಾರ್ಟಿ ಹಾಳು ಮಾಡಿದ್ದೇ ಅವನು, ಸಿಬಿಐ ತನಿಖೆ ಮಾಡಿಸೋಕ್ಕೆ ಅವನಿಗೆ ಹೇಳಿ ಎಂದು ಏಕವಚನದಲ್ಲೇ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್… ಜ.27 ಕ್ಕೆ ದೆಹಲಿಯಲ್ಲಿ ಮಹತ್ವದ ಸಭೆ…