ಬೆಂಗಳೂರು : ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅವರು ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಮರ ನೆಟ್ಟಿರುವುದಕ್ಕೆ ಹಾವೇರಿಯ ಅಗಡಿ ಅಕ್ಕಿಮಠದಿಂದ ಪರಿಸರ ರಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.
ಈ ಬಗ್ಗೆ ಅಗಡಿ ಅಕ್ಕಿಮಠದ ಸ್ವಾಮೀಜಿ ಮಾತನಾಡಿ ಎಂ ಬಿ ಪಾಟೀಲ್ ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಮರ ನೆಟ್ಟಿದ್ದಾರೆ. ಇದೇ ತಿಂಗಳ 26ರಂದು ಪರಿಸರ ರಕ್ಷಕ ಪ್ರಶಸ್ತಿ ಪ್ರಶಸ್ತಿ ಪಧಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇವತ್ತು ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ, ಆ ಧರ್ಮ ಈ ಧರ್ಮ ಅಂತ ಸಂಘರ್ಷ ನಡೆಯುತ್ತಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಇಂತಹ ಬೆಳವಣಿಗೆ ನಿಲ್ಲಬೇಕು. ಪರಿಸರ ಉಳಿಸುವ ನೈಟ್ ಧರ್ಮಗಳ ನಡುವೆ ಪೈಪೋಟಿ ಹೆಚ್ಚಾಗಬೇಕು. ಮರ ನೆಡುವ ನಿಟ್ಟಿನಲ್ಲಿ ಜಾತಿಗಳ ನಡುವೆ ಪೈಪೋಟಿ ಹೆಚ್ಚಾಗಬೇಕು, ಅಂದಾಗ ಮಾತ್ರ ಈ ಭೂಮಿ ಉಳಿಯುತ್ತೆ. ಒಂದು ಕಡೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ, ಪರಿಸರ ಹಾನಿಯಿಂದ ಮಳೆ ಕಡಿಮೆಯಾಗಿದೆ.
ಇನ್ನೂ ಇದೇ ವೇಳೆ ಆಜಾನ್ ಮೈಕನಲ್ಲಿ ಕೂಗುವುದರಿಂದ ಭಜನೆ ಮೈಕನಲ್ಲಿ ಕೂಗುವುದರಿಂದ ದೇವರಿಗೆ ಏನು ಕೇಳಿಸುವುದಿಲ್ಲ. ಸುಮ್ಮನೆ ವಿನಾಕಾರಣ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷ ನಿಲ್ಲಬೇಕು, ಸಮಯದಲ್ಲಿ ಶಾಂತಿ ನೆಲೆಸಬೇಕು. ಪರಿಸರ ರಕ್ಷಣೆಗೆ ಸಸಿ ನೆಡುವ ಕೆಲಸ ಎಲ್ಲ ಧರ್ಮದ ಜನರು ಮಾಡಬೇಕು ಎಂದು ಹೇಳಿದ್ದಾರೆ.