ಹಾಸನ: ಹಿಜಾಬ್ ನಮ್ಮ ಹಕ್ಕು.. ನಮಗೆ ಹಿಜಾಬ್ ಬೇಕೇಬೇಕು. ಹೈಕೋರ್ಟ್ ತೀರ್ಪನ್ನು ಒಪ್ಪುವುದಿಲ್ಲ ಎಂದು ಹಾಸನದ ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ.
ಹಾಸನದ ಎಂ.ಜಿ.ರಸ್ತೆಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮಾತನಾಡಿದ್ದು, ಹಿಜಾಬ್ ಇಲ್ಲದೇ ನಾವು ಪಾಠ ಕೇಳೋದೇ ಇಲ್ಲ. ತರಗತಿಗೆ ಹೋಗ್ತೇವೆ.. ಆದರೆ ಹಿಜಾಬ್ ಬೇಕು. ಮೊದಲಿನಿಂದ ಹಿಜಾಬ್ ಹಾಕ್ತಿದ್ದೇವೆ.. ಈಗಲೂ ಹಾಕುತ್ತೇವೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ಧಾರೆ. ಇದೇ ವೇಳೆ ಕೇಸರಿ ಶಾಲು ಮೊದಲಿನಿಂದ ಇತ್ತಾ ಎಂದು ಪ್ರಶ್ನಿಸಿದ್ದು, ಯೂನಿಫಾರಂ ಹಾಕ್ಕೊಂಡು ಅದರ ಮೇಲೆ ಬ್ಲ್ಯಾಕ್ ವೇಲ್ ಹಾಕುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಾರ್ಚ್ 17 ರ ಸಂಭ್ರಮಕ್ಕೆ ಹೆಲಿಕಾಪ್ಟರ್ ಭರಾಟೆ… ಅಪ್ಪು ಕಟೌಟ್ ಗಳಿಗೆ ಪುಷ್ಪಾರ್ಚನೆ ಮಾಡಲು ಹೆಲಿಕಾಪ್ಟರ್ ಗಳು ರೆಡಿ..!