ನೆಚ್ಚಿನ ಸೋದರಳಿಯ ಚಿರು ಸರ್ಜಾರವರ ವಿಷಸ್ ಇಲ್ಲದೆ ಭಾವುಕರಾಗಿದ್ದ ಅರ್ಜುನ್ ಸರ್ಜಾರವರ ಮುಖದಲ್ಲಿ ಮೇಘನಾ ರಾಜ್ ರವರು ಮಂದಹಾಸವನ್ನು ಮೂಡಿಸಿದ್ದಾರೆ.
ಆಗಸ್ಟ್ 14 ಸ್ಯಾಂಡಲ್ವುಡ್ನ ಅಜಾತಶ್ರು ಚಿರು ಸರ್ಜಾರವರ ಮುದ್ದಿನ ಮಾವ ಅರ್ಜುನ್ ಸರ್ಜಾರವರ ಹುಟ್ಟು ಹಬ್ಬವಿತ್ತು. ಬಹುಭಾಷ ನಟನಾಗಿ ಅಪಾರ ಅಭಿಮಾನಿಗಳನ್ನೊಂದಿರುವ ಅರ್ಜುನ್ ಸರ್ಜಾರವರಿಗೆ ಕುಟುಂಬದವರು, ಆತ್ಮೀಯ ಸ್ನೇಯಿತರು ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಅರಿದು ಬಂದರು ಚಿರುವಿನ ಸಂದೇಶವಿಲ್ಲದೆ ಕಂಬನಿ ತುಂಬಿದ ಕಣ್ಣಿನಲ್ಲಿ ಅರ್ಜುನ್ ಸರ್ಜಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಅಪ್ಲೋಡ್ ಮಾಡಿ, ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು.
ಚಿರು ಜೊತೆ ನಿಂತಿರುವ ಮತ್ತು ಚಿರುವಿಗೆ ಅರ್ಜುನ್ ಸರ್ಜಾ ಅವರೇ ಮೇಕಪ್ ಮಾಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿ. ‘ನನ್ನ ಹುಟ್ಟುಹಬ್ಬದ ದಿನದೊಂದು ನನ್ನ ನೆಚ್ಚಿನ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ’. ಎಂದು ಬರೆದು ಕಂಬನಿ ಮಿಡಿದಿದ್ದರು.
ಇದನ್ನೂ ಓದಿ : ಇಷ್ಟು ದಿನಗಳ ಬಳಿಕ ಚಿರು ಸರ್ಜಾ ಬಗ್ಗೆ ಅರ್ಜುನ್ ಸರ್ಜಾ ಹೀಗ್ಯಾಕೆ ಹೇಳಿದ್ರು ? ಚಿರು ಸರ್ಜಾ ಮಾವನಿಗೆ ಬಾಕಿ ಉಳಿಸಿಕೊಂಡಿದ್ದೇನು ?
ಅಭಿಮಾನಿಗಳು ಅರ್ಜುನ್ ಸರ್ಜಾರವರಿಗೋಸ್ಕರ ಮಾಡಿದ್ದ ವೀಡಿಯೋವನ್ನು ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡಿ ಮಾಡಿ, ಚಿರು ಸರ್ಜಾರವರೇ ವಿಶ್ ಮಾಡಿದ ರೀತಿ ‘ಹ್ಯಾಪಿ ಬರ್ತಡೇ ಅಂಕಲ್. ಫ್ರಮ್ ಚಿರು ಅಂಡ್ ಟೀಂ’. ಎಂದು ಬರೆದು ಪೋಸ್ಟ್ ಮಾಡಿದ್ದು, ಹುಟ್ಟು ಹಬ್ಬದ ದಿನವ ಯುವಸಾಮ್ರಾಟನ ವಿಶಸ್ ಇಲ್ಲದೆ ದುಃಖಿತರಾಗಿದ್ದ ಅರ್ಜುನ್ ಸರ್ಜಾರವರ ಮುಖದಲ್ಲಿ ಮೇಘನ ನಗು ತರಿಸಿದ್ದಾರೆ.
ಚಿರುವಿನ ಅಗಲಿಕೆಯ ನೋವಿನಿಂದಾಗಿ ಸೋಷಿಲ್ ಮೀಡಿಯಾಗಳಿಂದ ಕೊಂಚ ದೂರವೇ ಉಳಿದಿರುವ ಮೇಘನಾ ರಾಜ್ ರವರು, ಅರ್ಜುನ್ ಸರ್ಜಾರವರಿಗೋಸ್ಕರ ಮಾಡಿರುವ ವಿಶೇಷ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.