ಬೆಂಗಳೂರು: ಮಾನಸಿಕವಾಗಿ ನೊಂದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.
ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಸುದರ್ಶನ್ ಶೆಟ್ಟಿ (45) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿವೃತ್ತ ಯೋಧರಾಗಿದ್ದ ಸುದರ್ಶನ್ ಶೆಟ್ಟಿ ನಂತರ ಪೊಲೀಸ್ ಇಲಾಖೆಗೆ ಸೇರಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯು ನಿರ್ವಹಿಸುತ್ತಿದ್ದರು.
ಸುದರ್ಶನ್ ಶೆಟ್ಟಿ ಕೆಲವು ವರ್ಷಗಳ ಹಿಂದೆ ಕುಡಿತದ ಚಟಕ್ಕೆ ಒಳಗಾಗಿದ್ದರು. ಬಳಿಕ ರಿಹ್ಯಾಬ್ಲಿಟೇಷನ್ ಸೆಂಟರ್ ಗೆ ತೆರಳಿ ಕುಡಿತದ ಚಟವನ್ನು ಬಿಟ್ಟಿದ್ದರು. ಆದರೆ ಇಂದು ಮನಸ್ಥಿತಿ ಸರಿಯಿಲ್ಲದ ಕಾರಣ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೋದಿ ಪ್ರಯಾಣಿಸೋ ರಸ್ತೆಯಲ್ಲಿರೋ ಕಾಲೇಜುಗಳಿಗೆ ರಜೆ ವಿಚಾರ..! ಸರ್ಕಾರದ ನಿರ್ಧಾರಕ್ಕೆ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ..!