ಚಿತ್ರದುರ್ಗ: ಕಳೆದ ವಿಧಾನಸಭೆ ಅಧಿವೇಶನದಲ್ಲಿ ನನ್ನ ತಾಯಿಯೇ ಮತಾಂತರವಾಗಿದ್ದಾರೆ ಎಂದು ತಿಳಿಸುವ ಮೂಲಕ ಮತಾಂತರದ ವಿರುದ್ಧ ಧ್ವನಿಯೆತ್ತಿದ್ದ ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇಂದು ಚರ್ಚ್ ಮುಂದೆ ನಿಂತು ಚರ್ಚೆಗೆ ಬಂದವರನ್ನು ಮತಾಂತರದ ಕುರಿತು ಪ್ರಶ್ನಿಸಿದ್ಧಾರೆ.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇಂದು ಹೊಸದುರ್ಗದ ಶಾಂತಿನಗರದಲ್ಲಿರುವ ಚರ್ಚ್ ಬಳಿ ನಿಂತಿ ಭಾನುವಾರದ ಪ್ರಾರ್ಥನೆಗಾಗಿ ಬಂದವರನ್ನು ನಿಮ್ಮದು ಯಾವ ಊರು, ಯಾವ ಸಮುದಾಯ, ಮತಾಂತರ ಆಗಿದ್ದೀರಾ? ಎಷ್ಟು ವರ್ಷದ ಹಿಂದೆ ಮತಾಂತರವಾಗಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭುಗಿಲೆದ್ದ ಕನ್ನಡಿಗರ ಆಕ್ರೋಶ… MES ಗೂಂಡಾಗಿರಿ ವಿರುದ್ಧ ಬೃಹತ್ ಪ್ರತಿಭಟನೆ…
ಕೆಲವರು ಶಾಸಕರ ಪ್ರಶ್ನೆಗೆ ಉತ್ತರಿಸಿದ್ದು, ಹಲವು ವರ್ಷಗಳಿಂದ ಚರ್ಚ್ ಗೆ ಬರುತ್ತಿದ್ದೇವೆ, ಮತಾಂತರ ಆಗಿದ್ದೇವೆ. ಚರ್ಚ್ ಗೆ ಬಂದಿದ್ದರಿಂದ ನನ್ನ ಆರೋಗ್ಯ ಸುಧಾರಿಸಿದೆ ಎಂದು ಉತ್ತರ ಕೊಟ್ಟಿದ್ದಾರೆ. ಚರ್ಚ್ ಬಳಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪ್ರಾರ್ಥನೆ ಮುಗಿಸಿ ಬರುವವರನ್ನು ಪ್ರಶ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.