ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಗಳಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ 168 ರನ್ ಗಳಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 169 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಗುಜರಾತ್ ತಂಡದ ಪರ ವೃದ್ಧಿಮಾನ್ ಸಾಹಾ 31 ರನ್ ಗಳಿಸಿರೆ, ಡೇವಿಡ್ ಮಿಲ್ಲರ್ 34, ಮ್ಯಾಥ್ಯೂ ವೇಡ್ 16 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಅಜೇಯ 62 ರನ್ ಗಳಿಸಿದರೆ, ರಶೀದ್ ಖಾನ್ 19 ರನ್ ಗಳಿಸಿದರು.
ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆ… ಜಿಲ್ಲೆಯ ಬಹುತೇಕ ಡ್ಯಾಂ, ಕೆರೆಗಳು ಸಂಪೂರ್ಣ ಭರ್ತಿ…
ಆರ್ ಸಿ ಬಿ ತಂಡದ ಪರ ಹ್ಯಾಜಲ್ ವುಡ್ 2 ವಿಕೆಟ್ ಪಡೆದರೆ, ವನಿಂದು ಹಸರಂಗಾ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.