ಸರ್ಕಾರಿ ಶಾಲೆಗಳೆಂದರೆ ಏನೋ ಒಂದು ರೀತಿಯ ಅಪಸ್ವರದ ಬಾವನೆ ನಮ್ಮಲ್ಲಿ ಮೂಡಿ ಬರತ್ತೆ. ಕಾರಣ ಸಮಯಕ್ಕೆ ಸರಿಯಾಗಿ ಬರದ ಶಿಕ್ಷಕರು. ಈಗಲೋ ಆಗಲೋ ಬೀಳುವ ಹಂತದಲ್ಲಿರುವ ಕಟ್ಟಡ, ವರ್ಷಗಳಿಂದ ಬಣ್ಣವನ್ನೆ ಕಾಣದ ಗೋಡೆಗಳು, ಆಟವಾಡಲು ಸರಿಯಾಗಿರದ ಮೈದಾನ, ಬೋಧಿಸಲು ಶಿಕ್ಷಕರ ಕೊರತೆ, ಇರದ ಮೂಲಭೂತ ಸೌಕರ್ಯಗಳು ಹೀಗೆ ಅನೇಕ ಕಾರಣಗಳಿಂದ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಿಂದ ತಮ್ಮ ಮಕ್ಕಳನ್ನ ದೂರ ಉಳಿಸೋರೆ ಹೆಚ್ಚು. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಮಾತ್ರ ಇದೆಲ್ಲದಕ್ಕೂ ವಿಭಿನ್ನ, ಓದಿದರೆ ಇದೇ ಶಾಲೆಯಲ್ಲೆ ಓದಬೇಕೆಂಬ ಭಾವನೆ ಈ ಶಾಲೆಯನ್ನು ನೋಡಿದರೆ ನಿಮಗೆ ಮೂಡಿ ಬರುವುದಂತೂ ಗ್ಯಾರಂಟಿ, ಅಷ್ಟಕ್ಕೂ ಯಾವ್ದಪ್ಪ ಆ ಸರ್ಕಾರಿ ಶಾಲೆ ಎಲ್ಲ ಶಾಲೆಗಳಿಗಿಂತ ಈ ಶಾಲೆ ಹೇಗೆ ಡಿಫರೆಂಟ್ ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ದೊಡ್ಡದಾಗಿ ಕಾಣುವ ಶಾಲೆಯ ಕಟ್ಟಡ, ಜ್ನಾನ ದೇಗುಲವಿದು ಕೈಮುಗಿದು ಬಾ ಒಳಗೆ ಎನ್ನುವ ಬೋರ್ಡ್, ಬೃಹತ್ತಾದ ಆಟದ ಮೈದಾನ, ಶಾಲೆ ಆವರಣದಲ್ಲೆಲ್ಲ ಹಸಿರು ವಾತಾವರಣ. ಖುಷಿಯಿಂದ ಓದಿನಲ್ಲಿ ಮಗ್ನರಾಗಿರುವ ಮಕ್ಕಳು. ಆಟವಾಡುತ್ತಿರುವ ಪುಟಾಣಿಗಳು, ಈ ದೃಶ್ಯಗಳನ್ನೆಲ್ಲ ನೋಡಿ ಇದ್ಯಾವ್ದೋ ಖಾಸಗೀ ಶಾಲೆ ಅನ್ಕೊಂಡ್ರ, ಹಾಗಾದ್ರೆ ನಿಮ್ ಊಹೆ ತಪ್ಪು, ಹೌದು ಖಾಸಗೀ ಶಾಲೆ ಅಲ್ಲ ಬದಲಿಗೆ ಇದೊಂದು ಸರ್ಕಾರಿ ಶಾಲೆ ಅಂದ್ರೆ ನೀವ್ ನಂಬಲೇ ಬೇಕು. ಎಲ್ಲ ತಂದೆ ತಾಯಿಗಳಿಗೂ ತಮ್ಮ ಮಕ್ಕಳನ್ನ ಉತ್ತಮ ಶಾಲೆಗೆ ಸೇರಿಸಬೇಕು ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಹಂಬಲವಿರುತ್ತದೆ. ಆದ್ದರಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನ ಖಾಸಗೀ ಶಾಲೆಗೆ ಸೇರಿಸುವವರೆ ಹೆಚ್ಚು ಕಾರಣ ಖಾಸಗೀ ಶಾಲೆಯಲ್ಲಿ ಸಿಗುವ ಸವಲತ್ತು ಸರ್ಕಾರಿ ಶಾಲೆಯಲ್ಲಿ ಇಲ್ಲ ಎನ್ನುವ ಮನೋಭಾವ ಎಲ್ಲರದ್ದು. ಆದರೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿರುವ ಈ ಸರ್ಕಾರಿ ಶಾಲೆಯು ಯಾವುದೇ ಖಾಸಗೀ ಶಾಲೆಗೆ ಕಮ್ಮಿ ಇರದಂತಿದೆ.
ಇದಕ್ಕೆ ಕಾರಣ ಇದೇ ಗ್ರಾಮದ ಹಿರಿಯರು ಆದ ನಾ ತಿಪ್ಪೇಸ್ವಾಮಿ ಅವರು. ಹೌದು ನಾ ತಿಪ್ಪೇಸ್ವಾಮಿ ಅವರು ಮೂಲತಃ ಇದೇ ಹೊಸಯಳನಾಡು ಗ್ರಾಮದಲ್ಲೆ ಹುಟ್ಟಿ ಬೇಳೆದಿದ್ದು. ಇದೇ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಹತ್ತರ ವರೆಗೆ ಓದಿ ನಂತರ ಬೆಂಗಳೂರು ಸೇರಿ ನಂತರದ ವಿಧ್ಯಾಬ್ಯಾಸವನ್ನು ಅಲ್ಲೆ ಮುಗಿಸಿದವರು. ಈಗ ಆರ್ ಎಸ್ ಎಸ್, ನ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯದ ಜನರಲ್ ಸೆಕರೇಟರಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಮೊದಲಿನಿಂದಲೂ ಸರ್ಕಾರಿ ಶಾಲೆಗಳ ಬಗೆಗೆ ವಿಶೇಷ ಆಸಕ್ತಿ ಇದ್ದು ತಾವು ಓದಿದ ಶಾಲೆಯನ್ನು ಅಭಿವೃದ್ಧಿ ಪಡಿಸುವ ಆಸಕ್ತಿ ಇವರನ್ನು ಕಾಡುತ್ತಿತ್ತು.
ಇದರಿಂದ ಕಳೆದ ಹತ್ತು ವರ್ಷಗಳಿಂದ ಈ ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನ ಒದಗಿಸುತ್ತ ಬಂದಿದ್ದಾರೆ. ನಗರ ಪ್ರದೇಶದ ಎಲ್ಲ ಸವಲತ್ತುಗಳನ್ನು ಗ್ರಾಮೀಣ ಪ್ರದೇಶಕ್ಕೆ ತಂದು ಗ್ರಾಮಗಳನ್ನ ಅಭಿವೃದ್ದಿ ಮಾಡಬೇಕೆಂಬ ಚಿಂತನೆಯಲ್ಲಿ ಗ್ರಾಮದ ಮುಖಂಡರು, ಪೋಷಕರು, ಹಾಗೂ ಹಿರಿಯ ವಿಧ್ಯಾರ್ಥಿಗಳ ಸಹಕಾರದಿಂದ ಕಳೆದ ಹತ್ತು ವರ್ಷದಿಂದ ಈ ಶಾಲೆಯ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನ ಒದಗಿಸಿದ್ದು ಸುಸಜ್ಜಿತವಾದ ಆಟದ ಮೈದಾನ ಇತರೆ ಕಲಿಕೆಗೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಕೊಡಿಸಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಿದ್ದಾರೆ. ಶಾಲೆಯ ಸಾಮಾಜಿಕ ಪರಿವರ್ತನೆಯೆ ಕೇಂದ್ರವಾಗಬೇಕೆಂಬ ದಿಶೆಯಲ್ಲಿ ತಾವು ಮಾಡಿದ್ದು ಕೆಲದ ಮಕ್ಕಳ ಅಂತಃಶಕ್ತಿ ಹಾಗೂ ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಭಿವೃದ್ದಿ ಕೆಲಸವನ್ನು ಮಾಡಿರುವುದಾಗಿ ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನಾಗರ ಪಂಚಮಿಯ ಪೂಜೆ ಹೇಗೆ ಮಾಡಿದ್ರೆ ನಿಮಗೆ ಧನ ಕನಕಗಳು ಒಲಿಯುತ್ತವೆ?
ಇನ್ನೂ ಈ ಶಾಲೆ ಕಳೆದ ಹತ್ತು ವರ್ಷ ಹಿಂದೆ ಯಾವುದೇ ಅಭಿವೃದ್ದಿ ಕಾಣದೇ ಮೂಲೆಗುಂಪಾಗಿತ್ತು. ಕೂರಲೂ ಸರಿಯಾಗಿ ಕುರ್ಚಿಯೂ ಇಲ್ಲದೆ, ಹಾಳಾದ ಕಟ್ಟಡದಲ್ಲಿ ಈ ಶಾಲೆಯು ನಡೆಯುತ್ತಿದ್ದು ಆ ಸ್ಥಿತಿಯಲ್ಲಿದ್ದ ಶಾಲೆಯನ್ನ ನಾ ತಿಪ್ಪೇಸ್ವಾಮಿ ಅವರು ಈ ಶಾಲೆಯ ಅಬಿವೃದ್ಧಿಗೆ ಕೈ ಹಾಕಿದ್ದು ಶಾಲೆಯ ಸುಮಾರು 20 ಕೊಠಡಿಗಳನ್ನ ಕಟ್ಟಿಸಿಕೊಟ್ಟಿದ್ದಲ್ಲದೆ ವಿದ್ಯುತ್ ಒದಗಿಸಿದ್ದಲ್ಲದೆ ಆಟದ ಮೈದಾನವನ್ನು ಸಹ ನಿರ್ಮಿಸಿ ಕೊಟ್ಟಿದ್ದಾರೆ. ಇದರಿಂದ ಶಾಲೆಯ ವಾತಾವರಣವು ಒಳ್ಳೆಯ ರೀತಿಯಿಂದ ಕೂಡಿದ್ದು ಉತ್ತಮವಾಗಿ ಬೋಧಿಸುವ ಶಿಕ್ಷಕರು ಇರುವ ಕಾರಣ ಇಲ್ಲಿ ಓದಿದ ಮಕ್ಕಳು ದೊಡ್ಡ ದೊಡ್ಡ ಹುದ್ದೆಗೂ ಹೋಗಿರೋ ನಿದರ್ಶನವಿದೆ ಮತ್ತು ವಿದ್ಯಾರ್ಥಿಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೂ ಸಹಾ ಇಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇದೆಲ್ಲ ಶಾಲೆಯು ಉತ್ತಮ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಅದೆಷ್ಟೋ ಜನರಿಗೆ ತಿಪ್ಪೇಸ್ವಾಮಿ ಅವರು ಮಾಡುತ್ತಿರುವ ಅಬಿವೃದ್ದಿ ಕೆಲಸ ಮಾದರಿಯಾಗಿದೆ. ಇದೇ ರೀತಿ ಎಲ್ಲರು ಚಿಂತನೆ ಮಾಡಿದರೆ ಹಳ್ಳಿ ದಿಲ್ಲಿಯಾಗುವುದು ದೂರ ಇಲ್ಲ ಅಂತಾನೆ ಹೇಳಬಹುದಾಗಿದೆ.
ವರದಿ : ವಿನಯ್ ಪಾಲೇಕರ್ ಬಿ ಟಿ ವಿ ನ್ಯೂಸ್ ಚಿತ್ರದುರ್ಗ,