ಗೋವುಗಳು ಸಾಧಾರಣವಾಗಿ ಸೌಮ್ಯ ಸ್ವಭಾವದವಾಗಿರ್ತವೆ. ಆದ್ರೆ ಅದಕ್ಕೆ ಮದ ಬಂದಾಗ, ಅನಾವಶ್ಯಕ ಅವುಗಳನ್ನ ಕೆಣಕಿದ ಆಕ್ರಮಣ ಮಾಡುವುದು ಸಹಜ. ಇಧೆ ತರಹದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಮದವೇರಿದ ಗೂಳಿಯೊಂದು ಬೆಂಗಳೂರಿನ ಹೆಚ್ಎಎಲ್ನ ಅಳ್ಳಸಂದ್ರದಲ್ಲಿ ಹುಚ್ಚಾಟ ಮೆರೆದಿದೆ. ಇದ್ರಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಬೆಳ್ಳಂಬೆಳಗ್ಗೆ ಮದವೇರಿದ ಹೋರಿ ಎಲ್ಲೆಂದರಲ್ಲಿ ಅಡ್ಡಾಡಿ ರಸ್ತೆಯಲ್ಲಿ ಅಡ್ಡ ಬಂದವರ ಮೇಲೆ ಅಟ್ಯಾಕ್ ಮಾಡಿದೆ.
ಇದ್ರಿಂದ ಗುರಪ್ಪ ಮತ್ತು ಸೆಲ್ವಂ ಎಂಬುವರಿಗೆ ಗಾಯಗಳಾಗಿವೆ. ರಸ್ತೆಯ ಅಕ್ಕಪಕ್ಕದಲ್ಲಿದ್ದ ತಳ್ಳು ಅಂಗಡಿಗಳನ್ನೂ ಗೂಳಿ ಕೊಂಬಿನಿಂದ ಎತ್ತಿ ಎಸೆದಿದೆ.