ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ರಾಬರ್ಟ್. ಈಗಾಗಲೇ ಗಾಂಧಿನಗರದಲ್ಲಿ ಪೊಸ್ಟರ್ ಮತ್ತು ಸಾಂಗ್ಗಳಿಂಗ ಸಖತ್ ಸದ್ದು ಮಾಡುತ್ತಿದ್ದು, ಡಿ-ಬಾಸ್ ಫ್ಯಾನ್ಸ್ಗಳ ನಿರೀಕ್ಷೆಯನ್ನ ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಿದೆ.. ಹೀಗಾಗಿ ರೆತೆ ಮೇಲೆ ಡಿ ಬಾಸ್ ದರ್ಶನಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಅಂದು ಕೊಂಡಂತೆ ಆಗಿದ್ರೆ, ಈಗಾಗಗಲೇ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸಬೇಕಿತ್ತು. ಆದರೆ ಕೊರೋನಾದಿಂದಾಗಿ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ : ಕೀರ್ತಿ ಸುರೇಶ್ಗೂ ಡಾ. ರಾಜ್ಕುಮಾರ್ ಕುಟುಂಬಕ್ಕು ಇರುವ ಸಂಭದವೇನು..? ವೈರಲ್ ಆಗುತ್ತಿರುವ ಆ ಫೋಟೋ ಹಿಂದಿನ ಸತ್ಯವೇನು ಗೊತ್ತಾ..?
ಇನ್ನು ಇತ್ತೀಚೆಗಷ್ಟೆ ’ಡಿ ಬಾಸ್’ ಫ್ಯಾನ್ಸ್ಗಳು ರಾಬರ್ಟ್ ಚಿತ್ರದ ಪ್ರಮೋಷನ್ ಶುರುಮಾಡುವಂತೆ ನಿರ್ಮಾಪಕರನ್ನ ಕೇಳ್ತಾ ಇದ್ರು. ರಾಬರ್ಟ್ ಚಿತ್ರದ ಹೊಸ ಪೋಸ್ಟರ್ಗಳು, ಟ್ರೈಲರ್ ಅಥವಾ ಮತ್ತೇನಾದ್ರೂ ಕಂಟೆಂಟ್ ರಿಲೀಸ್ ಮಾಡಿ ಅಂತ ಮನವಿ ಮಾಡುತ್ತಿದ್ರು. ಹೀಗಾಗಿ ಅಭಿಮಾನಿಗಳ ಈ ಕೋರಿಕೆಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ರಿಯಾಕ್ಟ್ ಮಾಡಿದ್ದು, ಸದ್ಯದಲ್ಲೇ ರಾಬರ್ಟ್ ಸಿನಿಮಾದ ಅಪ್ಡೇಟ್ ಕೊಡೋದಾಗಿ ಹೇಳಿದ್ರು.
ಇದನ್ನೂ ಓದಿ : ದಾರಿಹೋಕನ ಹೊಟ್ಟೆ ಸೀಳಿದ ಗುಂಡು: ಪೈನಾನ್ಸಿಯರ್ ಮಾಡಿದ ಯಡವಟ್ಟು
ಇದೀಗ ಜುಲೈ 27ರಂದು ರಾಬಟ್ ಚಿತ್ರತಂಡ ವಿಶೇಷ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ, ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಪೋಸ್ಟರ್ ಮೂಲಕ ಸಿಹಿ ಸುದ್ದಿ ನೀಡಲು ರಾಬರ್ಟ್ ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ : ಡಾಲಿ ಧನಂಜಯ್ ’ಆ’ ಫೋಟೋ ವೈರಲ್.! ಹಾಗಾದ್ರೆ ’ಆ’ ಫೋಟೋದಲ್ಲಿ ಅಂತದ್ದೇನಿದೆ.?
Next official poster of our #Roberrt will be released on 27th July,2020 (Monday) at 10am on occasion of our producer @umap30071 sir Birthday.. let all ur love n support shower as always 🤗🙏#DBoss @dasadarshan@UmapathyFilms @StarAshaBhat @aanandaaudio pic.twitter.com/lYUq5G0PHe
— Tharun Sudhir (@TharunSudhir) July 25, 2020