ಬೆಂಗಳೂರು: ಪವರ್ ಸ್ಟಾರ್ ಫ್ಯಾನ್ಸ್ಗೆ ಗುಡ್ನ್ಯೂಸ್ . ಅಪ್ಪು ಕೊನೇ ಚಿತ್ರ ಜೇಮ್ಸ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಅಪ್ಪು ಹುಟ್ಟುಹಬ್ಬ ಮಾರ್ಚ್ 17ರಂದು ಸಿನಿಮಾ ರಿಲೀಸ್ ಮಾಡೋ ಸಾಧ್ಯತೆಗಳಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳುಗಳು ಕಳೆದರೂ ಅವರ ನೆನಪು ಅಭಿಮಾನಗಳ ಮನದಲ್ಲಿ ಕಡಿಮೆಯಾಗುತ್ತಿಲ್ಲ. ಈ ನಡುವೆ ಅಪ್ಪು ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕೊನೆಯ ಚಿತ್ರ ಜೇಮ್ಸ್ ಶೂಟಿಂಗ್ ಸಂಪೂರ್ಣ ಮುಗಿದಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಕೊನೆಯ ದಿನದ ಶೂಟಿಂಗ್ ಸೆಟ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಭಾಗಿಯಾಗಿದ್ದು, ಇನ್ನು, ಅಪ್ಪು ಹುಟ್ಟುಹಬ್ಬ ಮಾರ್ಚ್ 17ರಂದು ಸಿನಿಮಾ ರಿಲೀಸ್ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ:ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಪುನೀತ್ ರಾಜ್‌ಕುಮಾರ್ ಪುಟಾಣಿ ಫ್ಯಾನ್ಸ್…!