ಬೆಂಗಳೂರು: ಮಾವು ಪ್ರಿಯರಿಗೆ ಗುಡ್ ನ್ಯೂಸ್..ಬೆಳೆಗಾರರಿಗೂ ಇದು ಖುಷಿ ಸುದ್ದಿ. ಸರ್ಕಾರದಿಂದಲೇ ಜನರ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸುವ ಯೋಜನೆ ಶುರುವಾಗಿದೆ. ಇದಕ್ಕಾಗಿ ವೆಬ್ಸೈಟ್ ಆರಂಭಿಸಿರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಗ್ರಾಹಕರ ಮನೆ ಬಾಗಿಲಿಗೆ ಆನ್ಲೈನ್ ಮೂಲಕ ಮಾವನ್ನು ತಲುಪಿಸಲಿದೆ.
ಮೇ 16 ರಂದು www.karsirimangoes.karnataka.gov.in ವೆಬ್ಸೈಟ್ಗೆ ತೋಟಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಿದ್ರು. ಕರ್ಸಿರಿ ಮ್ಯಾಂಗೋಸ್ ವೆಬ್ಸೈಟ್ ಅಂತಾ ಹೆಸರಿಟ್ಟಿದ್ದು, ಅಲ್ಫೋನ್ಸೋ, ಬಂಗನಪಲ್ಲಿ, ನೀಲಂ, ಆಮ್ರಪಾಲಿ, ದಶೆಹರಿ, ಕೇಸರ್, ಬೆನೇಶನ್, ತೋತಾಪುರಿ, ಮಾಲ್ಗೋವಾ, ಮಲ್ಲಿಕಾ, ರಸಪುರಿ ಮತ್ತು ಸೆಂಧುರ ಮಾವಿನ ತಳಿಗಳು ವೆಬ್ಸೈಟ್ನಲ್ಲಿ ಲಭ್ಯವಿದೆ. ದಾಳಿಂಬೆ, ಪೇರಳೆ, ರಂಬುಟಾನ್, ಆವಕಾಡೊ ಮತ್ತು ಅಂಜೂರದಂತಹ ತಾಜಾ ಮತ್ತು ವಿದೇಶಿ ಹಣ್ಣುಗಳೂ ಸಿಗಲಿವೆ.