ನಟಿ ಭಾಮಾ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳಾದ ಶೈಲೂ, ಆಟೋರಾಜ ಸಿನಿಮಾಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಭಾಮಾ ಅವ್ರ ವೈವಾಹಿಕ ಜೀವನದಲ್ಲಿ ಬಿರುಕು ಕಂಡುಬಂದಿದೆ. ಭಾಮಾ ಅವರು 2018ರಿಂದ ನಟನೆಯಿಂದ ದೂರ ಸರಿದಿದ್ದರು. 2020ರಲ್ಲಿ ಉದ್ಯಮಿ ಅರುಣ್ ಎಂಬುವರನ್ನ ಭಾಮಾ ವಿವಾಹವಾಗಿದ್ದರು.ಅವರಿಗೆ ಎರಡು ವರ್ಷದ ಮಗಳಿದ್ದಾರೆ. ಇವರ ದಾಂಪತ್ಯ ಜೀವನದಲ್ಲಿ ಇದೀಗ ಸಮಸ್ಯೆ ಕಾಣಿಸುತ್ತಿದೆ. ಭಾಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಮುಂಚೆ ಪತಿ ಜೊತೆಗೆ ಹಾಗೂ ತಮ್ಮ ಪುಟ್ಟ ಸಂಸಾರದೊಂದಿಗಿನ ಹಲವಾರು ಫೋಟೋಗಳನ್ನ ಶೇರ್ ಮಾಡಿದ್ದರು, ಆದರೆ ಇದೀಗ ಅವೆಲ್ಲಾ ಡಿಲೀಟ್ ಆಗಿದ್ದು, ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ಆರಂಭವಾಗಿದೆ.
ಬಹು ಭಾಷಾ ನಟಿ ಭಾಮಾ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಇಬ್ಬರು ದಂಪತಿ ಅದ್ದೂರಿಯಾಗಿ ಆಚರಿಸಿದ್ದರು. ಆ ವೀಡಿಯೋ ಶೇರ್ ಮಾಡಿದ್ದರು. ಎರಡನೇ ವರ್ಷದ ಮಗಳ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋ ಹಂಚಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಇದರ ಕುರಿತಾಗಿ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ, ಭಾಮಾ ಅವರ ಪತಿಯೊಂದಿಗೆ ಅಂತರ ಕಾಯ್ದುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಸದ್ಯ ಸಿನಿಮಾ ಕ್ಷೇತ್ರದಿಂದ ದೂರವಿರುವ ಇವರು ವೈಯಕ್ತಿಕ ಹಾಗೂ ಸಾಂಸಾರಿಕ ಜೀವನದಲ್ಲಿ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಕಬ್ಜ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್…!