ಬೆಂಗಳೂರು: ಪ್ರೇಕ್ಷಕರ ನೆನಪಿನಲ್ಲಿ ಉಳಿಯೋಕೆ ನೂರಾರು ಸಿನಿಮಾಗಳಲ್ಲಿ ನಟಿಸ್ಬೇಕಿಲ್ಲ.. ಕೆಲವೇ ಪಾತ್ರಗಳಿಗೆ ಜೀವತುಂಬಿ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದವರು ಇದ್ದಾರೆ.. ಅಮೂಲ್ಯ ಹೆಸ್ರು ಕೇಳದ ಕನ್ನಡ ಸಿನಿರಸಿಕರು ಇರಲಿಕ್ಕಿಲ್ಲ.. ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಈ ಚೆಲುವೆ ನಂತ್ರ ನಾಯಕಿಯಾಗಿಯೂ ಸಕ್ಸಸ್ ಕಂಡ್ರು.. ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಮೋಡಿ ಮಾಡಿದ್ರು.. ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಂದನವನದ ಗೋಲ್ಡನ್ ಕ್ವೀನ್ ಗೋಲ್ಡನ್ ಸಿನಿಜರ್ನಿಯ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ಓದಿ..
ಇದನ್ನೂ ಓದಿ: ಸೋದರಳಿಯನ ಹೆಂಡತಿಗೆ ವಿಷ ಕುಡಿಸಲು ಹೋಗಿದ್ರಾ ರಾಜು ತಾಳಿಕೋಟೆ..? ಕೌಟುಂಬಿಕ ಕಲಹಕ್ಕೆ ಕಾರಣವೇನು..?
ಅಂದಕ್ಕೆ ಅಭಿನಯ ಅನ್ನೋ ಬಟ್ಟೆ ತೊಡಿಸಿದಂತ ಮುದ್ದು ಮುಖದ ಸುಂದರಿ ಅಮೂಲ್ಯ.. ಗಣೇಶ್, ದುನಿಯಾ ವಿಜಿ, ಯಶ್, ಪ್ರಕಾಶ್ ರೈ ರೀತಿಯ ಸ್ಟಾರ್ಗಳ ಸಿನಿಮಾಗಳಲ್ಲಿ ನಟಿಸಿ, ಸೈ ಅನ್ನಿಸಿಕೊಂಡ ಚೆಲುವೆ ಈಕೆ.. ಐಸೂ ಅಂತ್ಲೇ ಅಮೂಲ್ಯ ಅಭಿಮಾನಿಗಳಿಗೆ ಅಚ್ಚುಮೆಚ್ಚು.. ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿದ ಅಮ್ಮುನ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ನೋಡೊಕೆ ಅಭಿಮಾನಿಗಳು ಕಾಯ್ತಿದ್ದಾರೆ..
ಇದನ್ನೂ ಓದಿ: ಗ್ರ್ಯಾಂಡ್ ಬರ್ತಡೇಗೆ ಬ್ರೇಕ್ ಹಾಕಿದ ಉಪ್ಪಿ…ಡೈರೆಕ್ಷನ್ ಕ್ಯಾಪ್ ತೊಡೋದಕ್ಕೆ ರೆಡಿ ಆದ್ರಾ ಸೂಪರ್ ಸ್ಟಾರ್..?
28ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್..! ಕಿಂಚಿತ್ತು ಕಮ್ಮಿ ಆಗಿಲ್ಲ ‘ಚೆಲುವಿನ ಚಿತ್ತಾರ’ ಐಸು ಕ್ರೇಜ್ !
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವಂತೆ ಅಮೂಲ್ಯ ಬಾಲ್ಯದಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಶುರು ಮಾಡಿದ್ರು.. ಚಿಕ್ಕಂದಿನಲ್ಲೇ ಭರತನಾಟ್ಯ ಪ್ರವೀಣೆಯಾಗಿದ್ದ ಅಮೂಲ್ಯ ಅವ್ರಿಗೆ ಕಿರುತೆರೆ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು.. ಆ ನಂತ್ರ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಪರ್ವ ಸಿನಿಮಾದಲ್ಲಿ ನಟಿಸೋ ಬಾಲನಟಿಯಾಗಿ ಸಿಲ್ವರ್ ಸ್ಕ್ರೀನ್ಗೆ ಎಂಟ್ರಿ ಕೊಟ್ರು.. ಸುದೀಪ್, ಪುನೀತ್ ರಾಜ್ಕುಮಾರ್ರಂತಹ ಸ್ಟಾರ್ಗಳ ಜೊತೆಗೂ ಪುಟಾಣಿ ಅಮೂಲ್ಯ ಮೋಡಿ ಮಾಡಿದ್ರು..
ಚೆಲುವಿನ ಚಿತ್ತಾರ ಅಮೂಲ್ಯ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ.. ಕಲಾಸಾಮ್ರಾಟ್ ಎಸ್. ನಾರಾಯಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು.. ತಮಿಳು ರೀಮೇಕ್ ಆದ್ರು, ಕನ್ನಡ ಸಿನಿಮಾ ಅನ್ನುವ ಮಟ್ಟಿಗೆ ಚೆಲುವಿನ ಚಿತ್ತಾರ ಮೋಡಿ ಮಾಡಿತ್ತು.. ಅದ್ರಲ್ಲೂ ಗಣೇಶ್ ಮತ್ತು ಅಮೂಲ್ಯ ಕಾಂಬಿನೇಷನ್ ತೆರೆಮೇಲೆ ಜಾದೂ ಮಾಡಿತ್ತು..
ಚಿತ್ತಾರ ಚಿತ್ರದ ನಾಯಕಿ ಪಾತ್ರಕ್ಕೆ ಅಮೂಲ್ಯ ಸೂಟ್ ಆಗಲ್ಲ ಅಂತ್ಲೇ ಅಂದುಕೊಂಡಿದ್ರಂತೆ ನಿರ್ದೇಶಕರು.. ಬಹಳ ಚಿಕ್ಕ ಹುಡುಗಿ ಅನ್ನಿಸುವಂತಿದ್ದಾಳೆ ಬೇಡ ಅಂತ್ಲೇ ಅಂದುಕೊಂಡಿದ್ರಂತೆ.. ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಗೊತ್ತಾಗಿದ್ದು ಏನು ಅಂದ್ರೆ, ಅಮೂಲ್ಯ ಅಲ್ದೇ ಬೇರೆ ಯಾರನ್ನು ಆ ಪಾತ್ರದಲ್ಲಿ ಊಹಿಸಿಕೊಳ್ಳೋಕೆ ಸಾಧ್ಯವಾಗ್ತಿರಲಿಲ್ಲ.. ಒಂದೇ ಸಿನಿಮಾದಲ್ಲಿ ಸ್ಕೂಲ್ ಹುಡುಗಿಯಾಗಿ, ಕಾಲೇಜು ಹುಡುಗಿಯಾಗಿ, ಗೃಹಣಿಯಾಗಿ ಕಾಣಿಸಿಕೊಂಡು ಅಮೂಲ್ಯ ಕಮಾಲ್ ಮಾಡಿದ್ರು..
ಚಿತ್ರದಲ್ಲಿ ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ದೃಶ್ಯಗಳಲ್ಲೂ ಸೈ ಅನ್ನಿಸಿಕೊಂಡ್ರು.. ಚೆಲುವಿನ ಚಿತ್ತಾರ ಚಿತ್ರದ ಐಸೂ ಪಾತ್ರ ಅಮೂಲ್ಯಗೆ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಸೃಷ್ಟಿಸಿಬಿಡ್ತು.. ಆಟೋಗಳ ಮೇಲೆ ಅಮೂಲ್ಯ ಫೋಟೋ ರಾರಾಜಿಸೋಕೆ ಶುರುವಾಯ್ತು.. ಗಣಿ- ಅಮೂಲ್ಯ ಕೆಮೆಸ್ಟ್ರಿ, ಮನೋಮೂರ್ತಿ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಯ್ತು.. ಸಿನಿಮಾ ಶತದಿನೋತ್ಸವ ಆಚರಿಸಿ, ಸದ್ದು ಮಾಡ್ತು..
ಗಣಿ, ಯಶ್, ಪ್ರಕಾಶ್ ರೈ ಜೊತೆ ತೆರೆ ಹಂಚಿಕೊಂಡ ಚೆಲುವೆ..! ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಮೂಲ್ಯ ಮೋಡಿ
ಚೆಲುವಿನ ಚಿತ್ತಾರ ರೀತಿಯಲ್ಲೇ ಅಮೂಲ್ಯಗೆ ಮತ್ತೊಂದು ಒಳ್ಳೆ ಪಾತ್ರ ಸಿಕ್ಕಿದ್ದು ನಾನು ನನ್ನ ಕನಸು ಚಿತ್ರದಲ್ಲಿ.. ಸ್ವತ: ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ ಈ ಚಿತ್ರದಲ್ಲಿ ಐಸೂ ಲೀಡ್ ರೋಲ್ ಪ್ಲೇ ಮಾಡಿದ್ರು.. ಪ್ರಕಾಶ್ ರೈ ಮಗಳ ಪಾತ್ರದಲ್ಲಿ ನಟಿಸಿ ಗೆದ್ರು..
ತಂದೆ ಮಗಳ ಅದ್ಭುತ ಬಾಂದವ್ಯದ ಚಿತ್ರ ನಾನು ನನ್ನ ಕನಸು ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆದಿತ್ತು.. ಹಂಸಲೇಖ ಸಾಹಿತ್ಯ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.. ಕನಸು ಪಾತ್ರದಲ್ಲಿ ಸೊಗಸಾಗಿ ನಟಿಸಿ, ಪ್ರಕಾಶ್ ರೈ ಅವ್ರಿಂದ ಭೇಷ್ ಅನ್ನಿಸಿಕೊಂಡ್ರು ಅಮೂಲ್ಯ..
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಮೂಲ್ಯ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಚೆಲುವಿನ ಚಿತ್ತಾರ ನಂತ್ರ ಶ್ರಾವಣಿ ಸುಬ್ರಮಣ್ಯಂ ಚಿತ್ರದಲ್ಲಿ ಈ ಜೋಡಿ ಮತ್ತೆ ಜೊತೆಯಾಗಿತ್ತು.. ಮಂಜು ಸ್ವರಾಜ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಅತ್ಯುತ್ತಮ ನಟಿಯಾಗಿ ಫಿಲ್ಮ್ ಫೇರ್ ಮತ್ತು ಸೈಮಾ ಪ್ರಶಸ್ತಿ ಪಡೆದ್ರು ಅಮೂಲ್ಯ..
ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಗಜಕೇಸರಿ ಚಿತ್ರದಲ್ಲಿ ಅಮೂಲ್ಯ ಬಣ್ಣ ಹಚ್ಚಿದ್ರು.. ಚಿತ್ರದಲ್ಲಿ ಯುವ ಪರಿಸರ ಶಾಸ್ತ್ರಜ್ಞೆ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ರು.. ಕೃಷ್ಣ ನಿರ್ದೇಶನದ ಗಜಕೇಸರಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಭಾರೀ ಸೌಂಡ್ ಮಾಡಿತ್ತು..
ಬರ್ತ್ಡೇ ಸಂಭ್ರಮದಲ್ಲಿದ್ದಾರೆ ಅಭಿಮಾನಿಗಳ ನೆಚ್ಚಿನ ಐಸೂ..!ಮತ್ತೆ ಬಣ್ಣ ಹಚ್ತಾರಾ ಗೋಲ್ಡನ್ ಕ್ವೀನ್ ಅಮೂಲ್ಯ ?
ಖುಷಿ ಖುಷಿಯಾಗಿ, ರಾಮ್ಲೀಲಾ, ಕೃಷ್ಣ ರುಕ್ಕು ಹೀಗೆ ಅಮೂಲ್ಯ ಅಭಿನಯದ ಚಿತ್ರಗಳ ಲಿಸ್ಟ್ ಬೆಳೆಯುತ್ತಾ ಹೋಗುತ್ತೆ.. ಮಾಸ್ತಿಗುಡಿ ಅಮೂಲ್ಯ ಅಭಿನಯದ ಕೊನೆಯ ಚಿತ್ರ.. ಜಗದೀಶ್ ಕೈ ಹಿಡಿದ ಅಮೂಲ್ಯ ಸದ್ಯ ಅತ್ತೆ ಮನೆಯಲ್ಲಿ ಕಾಲ ಕಳೀತಿದ್ದಾರೆ.. ಸಿನಿಮಾಗಳಲ್ಲಿ ನಟಿಸ್ಲಿ, ನಟಿಸ್ದೇ ಇರ್ಲಿ ಅಮೂಲ್ಯ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ.. ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮೂಲ್ಯ ಮತ್ತೆ ಸಿನಿಮಾಗಳಲ್ಲಿ ನಟಿಸ್ತಾರಾ ? ಅನ್ನೋ ಕುತೂಹಲ ಅಭಿಮಾನಿಗಳಿದ್ದು, ಮತ್ತೆ ನಟಿಸಬೇಕು ಅನ್ನೋ ಮಹದಾಸೆಯೂ ಇದೆ..