ಪಣಜಿ: ಬಿಜೆಪಿ ಸರ್ಕಾರ ಗೋವಾದಲ್ಲಿ ಸತತ ನಾಲ್ಕನೇ ಬಾರಿ ಅಧಿಕಾರ ವಹಿಸಿಕೊಂಡಿದ್ದು, 2000 ಇಸವಿಯಿಂದಲೂ ಗೋವಾದಲ್ಲಿ ಕಮಲದ ದರ್ಬಾರ್ ನಡೆಸುತ್ತಿದೆ.
ಪಂಚರಾಜ್ಯ ಚುನಾವಣೆಯ ಗೋವಾ ಫಲಿತಾಂಶದಲ್ಲಿ 40 ಕ್ಷೇತ್ರಗಳ ಪೈಕಿ ಬಿಜೆಪಿ ಸರಳ ಬಹುಮತದ ಸಮೀಪಕ್ಕೆ ಬಂದಿದೆ. 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್-11, AAP-2 ಕ್ಷೇತ್ರಗಳಲ್ಲಿ , MGP-2, ಇತರರು-7 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ಧಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ಗೆ ಸೋಲು ಆಗಿದೆ. ಸಿಎಂ ಪ್ರಮೋದ್ ಸಾವಂತ್ ಪ್ರಯಾಸದ ಗೆಲುವನ್ನು ಸಾಧಿಸಿದ್ದಾರೆ. ಅಧಿಕಾರದ ಕನಸು ಕಂಡಿದ್ದ ಕಾಂಗ್ರೆಸ್ ಗೆಮತ್ತೆ ನಿರಾಸೆಯಾಗಿದೆ. ಬಿಜೆಪಿ ಎಂಜಿಪಿ ಪಕ್ಷದ ಬೆಂಬಲ ಪಡೆದು ಅಧಿಕಾರ ರಚಿಸಲಿದೆ. ಈಗಾಗಲೇ ಬಿಜೆಪಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದೆ.
ಇದನ್ನೂ ಓದಿ : ಪಂಜಾಬ್ ಕ್ಯಾಪ್ ಆಪ್ ಮುಡಿಗೆ… ಪೊರಕೆ ಆರ್ಭಟಕ್ಕೆ ಕಾಂಗ್ರೆಸ್ ಗುಡಿಸಿ ಗುಂಡಾಂತರ…