ಮಡಿಕೇರಿಯ ಸೋಮವಾರ ಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿ, 2023ರ ಚುನಾವಣೆಯಲ್ಲಿ ಜೆಡಿಎಸ್ನಿಂದ ನಾಪಂಡ ಮುತ್ತಪ್ಪನವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕುಮಾರಣ್ಣನವರಿಗೆ ಶಕ್ತಿ ತುಂಬಬೇಕು.
ಈ ಬಾರಿ ಜನತಾ ಸರ್ಕಾರ ತರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು. ಇನ್ನು, ನಾಪಂಡ ಮುತ್ತಪ್ಪ ಮಾತನಾಡಿ, ಈ ಬಾರಿ ಮಡಿಕೇರಿಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದಿದ್ದಾರೆ. ಅಲ್ಲದೇ, ಮಡಿಕೇರಿ ಕ್ಷೇತ್ರದ ಪಂಚರತ್ನ ರಥಯಾತ್ರೆಯ ಪ್ರಚಾರ ವಾಹನಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣನವರು ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು.
ಇದನ್ನೂ ಓದಿ : ಸುಧಾಕರ್ಗೆ ನಾನು ಟಿಕೆಟ್ ಕೊಡಿಸಿದ್ದಕ್ಕೆ ವೀರಪ್ಪ ಮೊಯ್ಲಿ ಸಾಕ್ಷಿ : ಸಿದ್ದರಾಮಯ್ಯ…