ಬೆಂಗಳೂರು: ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಗೌರಿ ಗಣೇಶ ಹಬ್ಬ ಅಂದರೆ ಯುವಕ ಯುವತಿಯರಿಗೆ ಖುಷಿಯೋ ಖುಷಿ.. ಇನ್ನೇನು ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ದೇವಸ್ಥಾನ ಹಾಗೂ ಮಾರುಕಟ್ಟೆಗಳಲ್ಲಿ ಭರ್ಜರಿ ತಯಾರಿ ನಡೆದಿದ್ರೆ, ಇತ್ತ ಹೂ, ಹಣ್ಣುಗಳ ಬೆಲೆಯಂತೂ ಗಗನಕ್ಕೇರಿದೆ.
ಕಳೆದ ಒಂದೂವರೆ ವರ್ಷದಿಂದ ಹಬ್ಬಗಳಿಗೆ ಬ್ರೇಕ್ ಹಾಕಿದ್ದ ಸರ್ಕಾರ ಇದೀಗ ಕೊರೊನಾ ಸೋಂಕು ಕಡಿಮೆ ಆಗ್ತಿದ್ದಂತೆ ಹಬ್ಬಗಳ ಆಚರಣೆಗೆ ಷರತ್ತು ಬದ್ಧ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಸರ್ಕಾರ ಗೌರಿ ಗಣೇಶ ಹಬ್ಬ ಸಾರ್ವಜನಿಕ ಆಚರಣೆಗೆ ಅವಕಾಶ ಕೊಟ್ಟಿದೆ. ಆದ್ರೆ, ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ ಕೆಲ ಷರತ್ತು ವಿಧಿಸಿದ್ದು, ನಿಯಮ ಉಲ್ಲಂಘಿಸದಂತೆ ಖಡಕ್ ಸೂಚನೆ ನೀಡಿದೆ. ಇದೆಲ್ಲದರ ನಡುವೆ ಹಬ್ಬದ ಪ್ರಯುಕ್ತ ಹಣ್ಣು ಹೂವು, ತರಕಾರಿ ರೇಟ್ ಡಬಲ್ ಆಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಹೂವು, ಹಣ್ಣಿನ ರೇಟ್ ಎಷ್ಟಿದೆ ಅಂತ ನೋಡೋದಾದ್ರೆ.
ದುಬಾರಿಯಾದ ಹಣ್ಣು..!
ಹಣ್ಣು – ಕಳೆದ ವಾರ (K.g ರೂ.) – ಪ್ರಸ್ತುತ (K.g ರೂ.)
ಶಿಮ್ಲಾ ಸೇಬು 60 – 120
ದಾಳಿಂಬೆ 80 – 150
ಮೂಸಂಬಿ 30 – 60
ಸೀತಾಫಲ 40 – 80
ದುಬಾರಿ ಹೂವು..!
ಹೂವು – ಕಳೆದ ವಾರ (K.g ರೂ.) – ಪ್ರಸ್ತುತ (K.g ರೂ.)
ಚೆಂಡು – 30 – 50 80 – 120
ಮಲ್ಲಿಗೆ – 600 – 800
ಮಳ್ಳೆ- – 400 – 600
ಗುಲಾಬಿ – 200 – 240
ಮಿಲ್ಕಿ ವೈಟ್ – 200 – 300
ಇನ್ನು ಬೆಲೆ ಏರಿಕೆ ನಡುವೆಯೂ ಕೆ.ಆರ್ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಜಾರ್, ರಾಜಾಜಿನಗರ, ಚಾಮರಾಜಪೇಟೆ ಹೀಗೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿದೆ. ಒಟ್ನಲ್ಲಿ ಹಣ್ಣು , ಹೂವುಗಳ ಬೆಲೆ ಗಗನಕ್ಕೇರಿದೆ. ಕೊರೊನಾ ಕಾರಣದಿಂದ ಚತುರ್ಥಿ ಆಚರಣೆ ಮಾಡಲಾಗದೆ ಕಳೆಗುಂದಿದ್ದ ಸಂಭ್ರಮಕ್ಕೆ ಈ ಭಾರಿ ಷರತ್ತು ಬದ್ಧ ಅನುಮತಿ ಸಿಕ್ಕಿದೆಯಾದ್ರೂ ದರ ಏರಿಕೆಯ ಬಿಸಿ ತಟ್ಟಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ: ಯಶವಂತಪುರ ಅಥವಾ ದಾಸನಪುರದಲ್ಲಿ ಒಂದುಕಡೆ ವ್ಯಾಪಾರಕ್ಕೆ ಅನುವು ಮಾಡಿಕೊಡಿ.. ಸರ್ಕಾರದ ವಿರುದ್ಧ ಎಪಿಎಂಸಿ ವರ್ತಕರ ಪ್ರತಿಭಟನೆ