ಚಿತ್ರದುರ್ಗ: ಗಣೇಶ ಹಬ್ಬ ಹಾಗೂ ಗಣೇಶ ಕೂರಿಸುವುದರ ಬಗ್ಗೆ ಸರ್ಕಾರ ಹೊರಡಿಸಿರುವ ನಿಬಂಧನೆಗಳು ಮೂರ್ಖತನದ ಪರಮಾವಧಿ ಎಂದು ಭಜರಂಗದಳದ ಶಿವಮೊಗ್ಗ ಸಂಯೋಜಕ ಪ್ರಭಂಜನ್ ಕಿಡಿಕಾರಿದ್ದು, ಹಿಂದೂಮಹಾ ಗಣಪತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ.
ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಆಚರಣೆಯ ಬಗ್ಗೆ ಕೆಲವು ನಿಬಂಧನೆಗಳನ್ನು ಹೊರಡಿಸಿದೆ. ಆದರ ಜೊತೆಗೆ ಷರತ್ತಗಳನ್ನು ಹಾಕಿದೆ ಆದರೆ ಸರ್ಕಾರ ಹೊರಡಿಸಿರುವ ಯಾವುದೇ ಆದೇಶವನ್ನು ನಾವು ಪಾಲಿಸುವುದಿಲ್ಲ. ಸರ್ಕಾರ ಕೋವಿಡ್ ನಿಯಮ ಪಾಲಿಸಿ ಎಂದು ಹೇಳಲಿ ಸ್ಯಾನಿಟೈಸರ್ ಮಾಸ್ಕ್ ಬಳಸಿ ಎಂದು ಹೇಳಲಿ ಆದರೆ ಐದು ಅಡಿ ಗಣೇಶ ಇರಬೇಕು, ಐದು ದಿನಗಳ ಕಾಲ. ಕೂರಿಸಬೇಕು ಎಂದೆಲ್ಲಾ ಷರತ್ತು ವಿಧಿಸಲಾಗಿದೆ. ಆದರೆ ಇದು ಗಣೇಶನನ್ನು ಟಾರ್ಗೆಟ್ ಮಾಡಿದ ಹಾಗಿದೆ. ಇದನ್ನು ನಾವು ಒಪ್ಪುವುದಿಲ್ಲ. ನಾವು ನಮ್ಮ ಸಂಪ್ರದಾಯದಂತೆ 21 ದಿನಗಳ ಕಾಲ ಕೂರಿಸುತ್ತೇವೆ. ದಿನವೂ ಕಾರ್ಯಕ್ರಮವನ್ನು ನಾವು ಮಾಡುತ್ತೇವೆ. ಇದಕ್ಕೆಅನುಮತಿ ಪಡೆಯುತ್ತೆವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷ ವಿಪುಲ್ ಜೈನ್, ಕಾರ್ಯಧ್ಯಕ್ಷ ಶರಣ್ ಕುಮಾರ್ ಇದ್ದರು.
ವರದಿ: ರಾಜು ಚಿತ್ರದುರ್ಗ
ಸ್ಥಳ: ಚಿತ್ರದುರ್ಗ
ಇದನ್ನೂ ಓದಿ:ಬ್ರಾಹ್ಮಣರು ಬುದ್ದಿವಂತರು, ಸ್ಥಿತಪ್ರಜ್ಞರು. ಬಡ ಬ್ರಾಹ್ಮಣರಿಗೆ ಹಣಕಾಸಿನ ನೆರವು: ಸಿಎಂ ಬೊಮ್ಮಾಯಿ..