ಬೆಂಗಳೂರು: ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಖೋಟಾನೋಟು ಜಾಲ ಭೇದಿಸಿದ್ದಾರೆ. ನಾಲ್ವರು ಅಂತರಾಜ್ಯ ಕಳ್ಳರನ್ನು ಅರೆಸ್ಟ್ ಮಾಡಿ 500 ಮುಖಬೆಲೆಯ 11 ಲಕ್ಷ ಮೊತ್ತದ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ರಜನಿ, ಪುಲ್ಲಲರೇವು ರಾಜ, ಗೋಪಿನಾಥ್ ಬಂಧಿತರು. ಆಂಧ್ರಪ್ರದೇಶದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಯತ್ನ ಮಾಡ್ತಿದ್ದರು. ಜನವರಿ 19ರಂದು ಉತ್ತರಹಳ್ಳಿಯ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ಗಿರಾಕಿಗಳಿಗೆ ಕಾಯ್ತಿದ್ದಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚರಣ್ ಸಿಂಗ್ ಮತ್ತು ರಜನಿ ಬಳಿ 11 ಲಕ್ಷ ನಕಲಿ ಖೋಟಾ ನೋಟು ಜಪ್ತಿ ಮಾಡಿ ವಿಚಾರಣೆ ಮಾಡಿದಾಗ ಮತ್ತಿಬ್ಬರ ಕೈವಾಡ ಪತ್ತೆಯಾಗಿದೆ.
ಇದನ್ನೂ ಓದಿ:ದೇಶಿಯ ಮೊಬೈಲ್ ಆಪರೇಟಿಂಗ್ ಸಿಸ್ಟಂ BharOS ಶೀಘ್ರವೇ ಮಾರುಕಟ್ಟೆಗೆ..!