ತಮಿಳುನಾಡು : ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ ಅವಘಡ ಸಂಭವಿಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಕ್ರೇನ್ ಮೂಲಕ ದೇಗುಲಕ್ಕೆ ಪ್ರದಕ್ಷಿಣೆ ಹಾಕಲಾಗುತ್ತಿತ್ತು. ಹರಕೆ ತೀರಿಸಲು ನೆರೆದಿದ್ದ ಭಕ್ತರಿಂದ ಹೂವಿನ ಹಾರ ಸ್ವೀಕರಿಸುತ್ತಿದ್ದ ವೇಳೆ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ. ಮೃತರನ್ನು ಎಸ್. ಭೂಪಾಲನ್ , ಬಿ. ಜೋತಿಬಾಬು, ಕೆ. ಮುತ್ತುಕುಮಾರ್ ಮತ್ತು ಚಿನ್ನಸಾಮಿ ಎಂದು ಗುರುತಿಸಲಾಗಿದೆ. ನೆಮೇಲಿಯ ಕೆಳ್‌ವೀದಿಯಲ್ಲಿರುವ ದ್ರೌಪತಿಯಮ್ಮನ್, ಮಾಂಡಿಯಮ್ಮನ್ ದೇಗುಲಗಳಲ್ಲಿ ಮಯಿಲೇರುಮ್ ತಿರುವಿಳಾ ಆಚರಣೆ ಮಾಡಲಾಗುತ್ತೆ. ಇದಕ್ಕೆ ಸಾವಿರಾರು ಭಕ್ತರು ಸೇರ್ತಾರೆ.
ಇದನ್ನೂ ಓದಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ : ಸಿ.ಟಿ.ರವಿ..