ತುಮಕೂರು : ಇಂದಿನಿಂದ ನಾಲ್ಕು ದಿನ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಬ್ರೇಕ್ ಹಾಕಿದ್ದಾರೆ. ರಥಯಾತ್ರೆ ನವೆಂಬರ್18 ರಿಂದ ಆರಂಭವಾಗಿತ್ತು.
ಕುಮಾರಸ್ವಾಮಿ ಸತತ 19 ದಿನ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಈಗ ನಾಲ್ಕು ದಿನ ಯಾತ್ರೆಗೆ ಬ್ರೇಕ್ ನೀಡಿದ್ದು, ಹೆಚ್ ಡಿಕೆ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮತ್ತೆ ಇದೇ ತಿಂಗಳು 11 ರಿಂದ ತುಮಕೂರು ಜಿಲ್ಲೆಯಿಂದ ಯಾತ್ರೆ ಆರಂಭವಾಗಲಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯಿಂದ ರಥಯಾತ್ರೆ ಆರಂಭವಾಗಲಿದೆ. ಇಂದು ಮಾಜಿ ಸಿಎಂ ಕುಮಾರಸ್ವಾಮಿ ಕೆಜಿಎಫ್ ನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ : BBMP ಚುನಾವಣೆ…ಡಿಸೆಂಬರ್ 14ಕ್ಕೆ ಹೈಕೋರ್ಟ್ ವಿಚಾರಣೆ…!