ತುಮಕೂರು : ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್ ಪ್ರೊಟೆಸ್ಟ್ ನಡೆಸಿದ್ದು, ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ ನಡೆಸಿದ್ದಾರೆ.
ಮಧುಗಿರಿ ಶಾಸಕ ವೀರಭದ್ರಯ್ಯ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಸಲಾಗುತ್ತಿದೆ. ದೇವೇಗೌಡರ ಕುರಿತ ರಾಜಣ್ಣ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ಧಾರೆ. IB ಸರ್ಕಲ್ನಿಂದ ಮಧುಗಿರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಕಾರ್ಯಕರ್ತರು ರಾಜಣ್ಣ ಪ್ರತಿಕೃತಿ ಧಹಿಸಲು ಮುಂದಾಗಿದ್ಧಾರೆ. ಪೊಲೀಸರು ಪ್ರತಿಕೃತಿ ದಹನ, ಅಣಕು ಶವಯಾತ್ರೆ ತಡೆದಿದ್ದಾರೆ. JDS ಕಾರ್ಯಕರ್ತರು, ದೇವೇಗೌಡರ ಅಭಿಮಾನಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ : ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!