ದಾವಣಗೆರೆ : ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಫಾರ್ಮಹೌಸ್ ನಲ್ಲಿ ವನ್ಯ ಪ್ರಾಣಿಗಳು ಕೇಸ್ ಪತ್ತೆ ಯಾಗಿದೆ. ಎಸ್ ಎಸ್ ಮಲ್ಲಿಕಾರ್ಜುನ ಸೇರಿ ಮೂರು ಜನಕ್ಕೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ನಿರೀಕ್ಷಣಾ ಜಾಮೀನು ಸಿಕ್ಕ ಹಿನ್ನೆಲೆ ಎಸ್ ಎಸ್ ಎಂ ಗೆ ಬಿಗ್ ರಿಲೀಪ್ ಸಿಕ್ಕಿದ್ದು, ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು ಬಂದಿದೆ. ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ರೈಸ್ ಮಿಲ್ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್ ಹಾಗೂ ಕರಿಬಸಯ್ಯಗೆ ಕೋರ್ಟ್ ಜಾಮೀನು ನೀಡಿದೆ. ಡಿ.21ರಂದು ನಗರದ ಆನೆಕೊಂಡದ ಬಳಿ ಇರುವ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಅರಣ್ಯ ಇಲಾಖೆ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ ನಡೆದಿದೆ. ದಾಳಿ ವೇಳೆ ವನ್ಯ ಮೃಗಗಳು ಪತ್ತೆ ಹಿನ್ನೆಲೆ ಅರಣ್ಯ ಇಲಾಖೆಯಿಂದ ದೂರು ದಾಖಲಾಗಿದೆ. ದೂರು ದಾಖಲೆ ಹಿನ್ನೆಲೆ ಮೂವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಎಸ್ ಎಸ್ ಮಲ್ಲಿಕಾರ್ಜುನ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಹಾಗೂ ಸಂಪಣ್ಣ ಮತ್ತು ಕರಿಬಸಯ್ಯ ಪರ ನ್ಯಾಯವಾದಿ ರಾಮದಾಸ್ ವಾದ ಮಂಡನೆ ಮಾಡಿದ್ದಾರೆ.
ಇದನ್ನೂ ಓದಿ : ಹಾರದ ಜತೆ ಮೊಟ್ಟೆಯೂ ಬರುತ್ತೆ… ರಶ್ಮಿಕಾ ಕುರಿತ ಟ್ರೋಲ್ಗೆ ಕಿಚ್ಚ ಸುದೀಪ್ ಕೊಟ್ರು ಖಡಕ್ ಉತ್ತರ…