ಬೆಂಗಳೂರು : ಕಾಂಗ್ರೆಸ್ಗೆ ಶಾಕ್ ಕೊಡ್ತಾರಾ ಆ ಸೀನಿಯರ್ ಲೀಡರ್..? ಕೈ ಬಿಟ್ಟು ದಳದ ಮನೆ ಪ್ರವೇಶ ಮಾಡ್ತಾರಾ ಆ ನಾಯಕ..? ಜೆಡಿಎಸ್ ಕಾಂಗ್ರೆಸ್ನ ದೊಡ್ಡ ನಾಯಕರಿಗೆ ಗಾಳ ಹಾಕಿದೆ.
ಅತೃಪ್ತ ನಾಯಕ ಎಸ್.ಆರ್ ಪಾಟೀಲ್ಗೆ ಮಾಜಿ ಸಿಎಂ HDK ಗಾಳ ಹಾಕಿದ್ದಾರೆ. ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಎಸ್.ಆರ್.ಪಾಟೀಲ್ ಜತೆ ಸಿ.ಎಂ.ಇಬ್ರಾಹಿಂ, ಹೆಚ್ಡಿಕೆ ಮಾತುಕತೆ ನಡೆಸಿದ್ಧಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೇಳಿದ ಕ್ಷೇತ್ರದಿಂದ ಟಿಕೆಟ್ ಕೊಡುವ ಆಫರ್ ಕೊಟ್ಟಿದ್ದು, ಉತ್ತರ ಕರ್ನಾಟಕದಲ್ಲಿ ಪಕ್ಷ ಬಲಿಷ್ಠಗೊಳಿಸಲು ಜೆಡಿಎಸ್ ಮೆಗಾ ಪ್ಲಾನ್ ಮಾಡಿದೆ.
ಎಸ್.ಆರ್.ಪಾಟೀಲ್ ಜತೆ ಹಲವು ಮುಖಂಡರ ಸೆಳೆಯಲು ರಣತಂತ್ರ ಹೂಡಿದೆ. ಪಾಟೀಲ್ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಅಸಮಾಧಾನದಲ್ಲಿದ್ಧಾರೆ. ಹೀಗಾಗಿ ಎಸ್.ಆರ್.ಪಾಟೀಲ್ ಸೆಳೆದುಕೊಳ್ಳಲು ಜೆಡಿಎಸ್ ಪ್ಲಾನ್ ನಡೆಸಿದೆ. ಜೆಡಿಎಸ್ ಆಫರ್ ಒಪ್ಪಿ ಕಾಂಗ್ರೆಸ್ ಬಿಡ್ತಾರಾ ಎಸ್.ಆರ್.ಪಾಟೀಲ್..?