ತಾಲಿಬಾನಿಗಳು ಕಾಬೂಲ್ ನಗರವನ್ನು ಸುತ್ತುವರೆಯುತ್ತಿದ್ದಂತೆಯೇ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಒಮನ್ ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅಶ್ರಫ್ ಘನಿ ಮತ್ತು ಅವರ ಕುಟುಂಬಸ್ಥರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಶ್ರಯ ನೀಡಿದ್ದು, ಅವರು ಯುಎಇನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಯುಎಇಯ ವಿದೇಶಾಂಗ ವ್ಯವಹಾರಗಳ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಮಾನವೀಯ ನೆಲೆಯಲ್ಲಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬಸ್ಥರಿಗೆ ಯುಎಇ ನಲ್ಲಿ ಆಶ್ರಯ ನೀಡಲಾಗಿದೆ’ ಎಂದು ತಿಳಿಸಿದೆ.
UAE Ministry of Foreign Affairs and International Cooperation confirms that the UAE has welcomed President Ashraf Ghani and his family into the country on humanitarian grounds pic.twitter.com/lER61n8skc
— ANI (@ANI) August 18, 2021
ನಿನ್ನೆ ಅಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅವರು ‘ತಾಯಿನಾಡನ್ನು ತಾಲಿಬಾನಿಗಳಿಗೆ ಮಾರಿ ಅಫ್ಘಾನಸ್ತಾನದಿಂದ ಪಲಾಯನ ಮಾಡಿರುವ ಅಶ್ರಫ್ ಘನಿಯನ್ನು ಹುಡುಕಲು ಇಂಟರ್ಪೋಲ್ ನೆರಲು ನೀಡಬೇಕು. ಅವರನ್ನು ಬಂಧಿಸಿ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದ್ದರು. ಇದೇ ವಿಧದಲ್ಲಿ ತಜಕಿಸ್ತಾನದಲ್ಲಿರುವ ಅಪ್ಘಾನಿಸ್ತಾನ ರಾಯಭಾರ ಕಚೇರಿ ಸಹ ಅಶ್ರಫ್ ಘನಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿತ್ತು.
ಭಾನುವಾರ ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಸುತ್ತುವರೆದಿದ್ದರು. ಈ ವೇಳೆ ಅಶ್ರಫ್ ಘನಿ ನಾಲ್ಕು ಕಾರುಗಳ ತುಂಬಾ ಹಣ ತುಂಬಿಸಿಕೊಂಡು ದೇಶ ಬಿಟ್ಟು ಪರಾರಿಯಾಗಿದ್ದರು. ಅವರಿಗೆ ತಜಕಿಸ್ತಾನದಲ್ಲಿ ಲ್ಯಾಂಡ್ ಆಗಲು ಅನುಮತಿ ದೊರೆತಿರಲಿಲ್ಲ. ಹಾಗಾಗಿ ಅವರು ಒಮನ್ ಗೆ ತೆರಳಿದ್ದಾರೆ ಎಂದು ಹಲವು ವರದಿಗಳು ತಿಳಿಸಿದ್ದವು.
ಇದನ್ನೂ ಓದಿ: 4 ಕಾರುಗಳ ತುಂಬ ಹಣ ತುಂಬಿಕೊಂಡು ಪಲಾಯನ ಮಾಡಿದ ಅಶ್ರಫ್ ಘನಿ