ಬೆಂಗಳೂರು : ಫಾರಿನ್ ಟ್ರಿಪ್ಗೂ ಮುನ್ನವೇ ಸಿಎಂ ಬಸವರಾಜ ಬೊಮ್ಮಾಯಿಗೆ ವರಿಷ್ಠರ ಬುಲಾವ್ ಕಳಿಸಿದ್ದು,
ಬಿಜೆಪಿ ಹೈಕಮಾಂಡ್ ನಾಯಕರು ದೆಹಲಿಗೆ ಬರುವಂತೆ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ಬರುವಂತೆ ದೂರವಾಣಿಯಲ್ಲಿ ವರಿಷ್ಠರ ಸೂಚನೆ ನೀಡಿದ್ದಾರೆ. ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಲಾವ್ ಕರೆದಿದ್ದು, ರಾಜ್ಯಸಭೆ, ಪರಿಷತ್ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿಢೀರ್ ಬದಲಾವಣೆಯಾಗಲಿದೆ. ಸಿಎಂಗೆ ವರಿಷ್ಠರ ಬುಲಾವ್ ಭಾರೀ ಕುತೂಹಲ ಕೆರಳಿಸಿದೆ.
ವರಿಷ್ಠರು ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ಸಿಎಂ ಬೊಮ್ಮಯಿ ಜೆಪಿ ನಡ್ಡಾ, ಅಮಿತ್ ಶಾ ಭೇಟಿ ಮಾಡಲಿದ್ದಾರೆ.