ಬೆಂಗಳೂರು : ಬೆಂಗಳೂರಿನ ಠಾಣಾ ವ್ಯಾಪ್ತಿಯಲ್ಲಿ ವರ್ಗಾವಣೆಯ ಸುರಿಮಳೆ ಸುರಿದಿದೆ. ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆಯ ಬಿಸಿ ತಟ್ಟಿದೆ. ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ PSI ಯಿಂದ ಹಿಡಿದು ಕಾನ್ಸ್ ಟೇಬಲ್ ವರೆಗೂ ಟ್ರಾನ್ಸ್ಫರ್ ಮಾಡಿದ್ಧಾರೆ. 1749 ಕಾನ್ಸ್ ಟೇಬಲ್, 1292 ಮುಖ್ಯಪೇದೆ, 43 ASI ಹಾಗೂ 163 PSI ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ಧಾರೆ.