ಬೆಂಗಳೂರು: ಕೊನೆಗೂ ಪಾಪಿಗೆ ಗುಂಡೇಟು ಬಿದ್ದಿದ್ದು, ಅರೆಸ್ಟ್ ಆದ್ಮೇಲೂ ಎಸ್ಕೇಪ್ ಆಗಲು ಯತ್ನಿಸಿದ್ದ ಆ್ಯಸಿಡ್ ನಾಗನ ಮೇಲೆ ಫೈರಿಂಗ್ ಮಾಡಲಾಗಿದೆ.
ಅರೆಸ್ಟ್ ಆದ್ಮೇಲೂ ಆ್ಯಸಿಡ್ ನಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ಹಿನ್ನೆಲೆ ಪೊಲೀಸರು ನಾಗನ ಮೇಲೆ ಫೈರಿಂಗ್ ಮಾಡಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸಿಕ್ಕಿದ್ದ ನಾಗೇಶನನ್ನ ಪೊಲೀಸರುಅರೆಸ್ಟ್ ಮಾಡಿ ಕರೆತರುತ್ತಿದ್ದರು. ಈ ವೇಳೆ ಕೆಂಗೇರಿ ಫ್ಲೈ ಓವರ್ ಬಳಿ ನಾಗ ಎಸ್ಕೇಪ್ಗೆ ಯತ್ನಿಸಿದ್ದಾನೆ. ಹಿಡಿಯಲು ಕಾನ್ಸ್ಟೇಬಲ್ ಮಹದೇವಯ್ಯ ಮುಂದಾಗಿದ್ದಾರೆ, ಆಗ ಗ್ಲಾಸ್ನಿಂದ ಆರೋಪಿ ನಾಗೇಶ ಇರಿಯಲು ಮುಂದಾಗಿದ್ದಾನೆ. ಕೂಡ್ಲೇ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಪ್ರಶಾಂತ್ರಿಂದ ಫೈರಿಂಗ್ ಮಾಡಿದ್ದಾರೆ. ಬಲಗಾಲಿಗೆ ಗುಂಡೇಟು ತಿಂದ ನಾಗೇಶ್ BGS ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ಹೆಡ್ಕಾನ್ಸ್ಟೇಬಲ್ ಮಹದೇವಯ್ಯಗೂ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಸಿಡ್ ದಾಳಿ ವೇಳೆ ಬಲಗೈ ಭಾಗಕ್ಕೂ ನಾಗೇಶ ಗಾಯ ಮಾಡಿಕೊಂಡಿದ್ದ. ಆ ಗಾಯ ಮಾಸಲು ಬೇರೆ-ಬೇರೆ ಆಸ್ಪತ್ರೆಗಳನ್ನು ಅಲೆದಾಡಿದ್ದ. ಆ ಗಾಯ ಮಾಸಲು ಬೇರೆ-ಬೇರೆ ಆಸ್ಪತ್ರೆಗಳನ್ನು ಅಲೆದಾಡಿದ್ದ ನಾಗೇಶ್, ಏಪ್ರಿಲ್ 28ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿ, ದಿನದಿನಕ್ಕೂ ವೇಷ ಮರೆಸಿಕೊಂಡು ಎಸ್ಕೇಪ್ ಆಗುತ್ತಿದ್ದ.
ಇದನ್ನೂ ಓದಿ:ನನ್ನ ಉಸಿರು ಬಡವರಿಗೆ ಮೀಸಲು : ಜಲಧಾರೆ ಸಮಾವೇಶದಲ್ಲಿ ಹೆಚ್ಡಿ ಕುಮಾರಸ್ವಾಮಿ ಸಂಕಲ್ಪ..!