ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಕೊಪ್ಪಳದ ಗುತ್ತಿಗೆದಾರ ಎರ್ರಿಸ್ವಾಮಿ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಎರ್ರಿಸ್ವಾಮಿ ಅವರು ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದರು. ಎರ್ರಿಸ್ವಾಮಿ ತಾವು ಮಾಡಿದ್ದ ಕಾಮಗಾರಿಯ ಬಿಲ್ ಪಾವತಿ ವಿಳಂಬವಾಗುತ್ತಿದೆ ಮತ್ತು ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಸರ್ಕಾರ ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಿಲ್ಲ.. ಕೋರ್ಟ್ ತೀರ್ಪು ಪಾಲಿಸಲು ಸರ್ಕಾರ ಬದ್ಧವಾಗಿದೆ: ಸಚಿವ ಅಂಗಾರ..
ಈಗ ಕಾರಟಗಿ ತಾಲೂಕು ಪಂಚಾಯತಿ ಇಒ ಗುತ್ತಿಗೆದಾರ ಎರ್ರಿಸ್ವಾಮಿ ವಿರುದ್ಧ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರ್ರಿಸ್ವಾಮಿ ಸರ್ಕಾರದ ನಿಯಮಾಳಿಗೆ ಬದ್ಧವಾಗಿರದೆ ನಂಬಿಕೆ ದ್ರೋಹ ಮಾಡಿದ್ದಾರೆ. ಸಾಮಗ್ರಿಗಳನ್ನು ಪೂರೈಸದೆ ತಾಂತ್ರಿಕ ಸಹಕಾರಿಗೆ ಹಣ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರ್ರಿಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 406ರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.
ಇದನ್ನೂ ಓದಿ: ಮುತಾಲಿಕ್ ಸಮಾಜಕ್ಕೆ ಬೆಂಕಿ ಇಡುವ ಕೆಲಸ ಮಾಡ್ತಿದ್ದಾರೆ… ಮುತಾಲಿಕ್ನ ಒದ್ದು ಒಳಗೆ ಹಾಕಿ: ಹೆಚ್.ಡಿ. ಕುಮಾರಸ್ವಾಮಿ ಗುಡುಗು…
ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಎರ್ರಿಸ್ವಾಮಿ ಕನಕಗಿರಿ ಕ್ಷೇತ್ರದ ಶಾಸಕರು, ಜಿಲ್ಲಾ ಪಂಚಾಯತಿ ಸಿಇಒ ಒತ್ತಡದಿಂದ ನನ್ನ ಮೇಲೆ ಕೇಸ್ ದಾಖಲಾಗಿದೆ. ನನಗೆ ನ್ಯಾಯ ಸಿಗದೆ ಹೋದರೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ರೀತಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.