ಹೊಸಕೋಟೆ : ಇದು ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ, ಹೆಂಡ್ತಿ ಜತೆ ಲಿಂಕ್ ಇಟ್ಕೊಂಡವನ ಮುಗಿಸೋಕೆ JCB ಸ್ಕೆಚ್ ಹಾಕಿದ್ದಾನೆ. ಬೆಂಗಳೂರು ಗ್ರಾಮಾಂತರದ ನಂದಗುಡಿ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ. ವಾರದ ಹಿಂದೆ ವ್ಯಕ್ತಿ ಕಾಣೆಯಾಗಿದ್ದ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಕಾಣೆಯಾಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಹೂತ್ತಿಟ್ಟಿದ್ದಾನೆ. ಆರೋಪಿ ಕೊಲೆ ಮಾಡಿ ತನ್ನದೇ ಜಮೀನಿನಲ್ಲಿ ಹೂತು ಹಾಕಿದ್ದಾನೆ. ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿಯಲ್ಲಿ ಕೊಲೆ ನಡೆದಿದೆ. 30 ವರ್ಷದ ಪ್ರಕಾಶ್ 53 ವರ್ಷದ ನಂದೀಶ್ನನ್ನು ಕೊಲೆ ಮಾಡಿದ್ದಾನೆ.
ನಂದೀಶ್ ಕೂಲಿಯಾಳುಗಳಿಗೆ ಹಣ ಕೊಟ್ಟು ಬರೋದಾಗಿ ಹೇಳಿ ಹೋಗಿದ್ದನು, ವಾಪಸ್ ಬಾರದೇ ಇದ್ದಾಗ ಜನವರಿ 12ರಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು, ನಂದಗುಡಿ ಪೊಲೀಸರು ಕುಟುಂಬಸ್ಥರ ದೂರಿನ ಮೇಲೆ ತನಿಖೆ ಮಾಡಿದ್ದಾರೆ.
ನಂದಗುಡಿ ಪೊಲೀಸರು ಪ್ರತಾಪ್ ಎಂಬಾತನನ್ನು ವಿಚಾರಣೆ ಮಾಡಿದ್ದಾರೆ. ಮಾಲೂರು ತಾಲೂಕಿನ ಬೈರನಹಳ್ಳಿ ಗ್ರಾಮದಲ್ಲಿ ಹೂತಿಟ್ಟಿದ್ದ ಆರೋಪಿಯಾಗಿದ್ದಾನೆ. ನಂದೀಶ್ ಪ್ರಕಾಶ್ ಮಡದಿ ಜತೆ ಫೋನ್ ಸಂಪರ್ಕದಲ್ಲಿದ್ದನು. ಆರೋಪಿ ಪ್ರಕಾಶ್ ಇದ್ರಿಂದ ನಂದೀಶ್ನನ್ನು ಕೊಲೆ ಮಾಡಿದ್ದಾನೆ. ಎರೆಹುಳು ಗೊಬ್ಬರಕ್ಕಾಗಿ ತನ್ನ ಜಮೀನಿನಲ್ಲಿ ಗುಂಡಿ ತೋಡಿಸಿದ್ದ, ಆರೋಪಿ ಅರೆಬರೆ ತೋಡಿದ್ದೀಯ ಅಂತಾ ಹೇಳಿ ಮುಚ್ಚದೇ ಬಿಟ್ಟಿದ್ದನು. ಪೊಲೀಸರು ವಾರದ ನಂತರ ಹತ್ಯೆ ಕೇಸ್ ಬಯಲು ಮಾಡಿದ್ದಾರೆ.
ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬದಂದು ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ರಿಲೀಸ್…