ಮಾಜಿ ಸಿಎಂ ಸಿದ್ದರಾಮಯ್ಯ ಮನೆ ಎದುರು ಹೈಡ್ರಾಮಾ ನಡೆದಿದೆ. ಕಾರ್ ನಿಲ್ಲಿಸೋ ವಿಚಾರಕ್ಕೆ ಸಿದ್ದು ಎದುರು ಮನೆ ನಿವಾಸಿಗಳು ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಮನೆ ಮುಂದೆ ಕಾರು ನಿಲ್ಲಿಸದಂತೆ ಎದುರು ಮನೆಯವರ ಜತೆ ಹೊಡೆದಾಟ ನಡೆಸಿದ್ದು, ಸಿದ್ದು ಬೆಂಬಲಿಗರು ಬೀದಿಗಿಳಿದಿದ್ದಾರೆ.
ಸಿದ್ದು ಬೆಂಬಲಿಗರಿಂದ ಎದುರು ಮನೆಯವರ ಮೇಲೆ ಹಲ್ಲೆ ನಡೆಸಿದ್ದು, ಕೊರಳು ಪಟ್ಟಿ ಹಿಡಿದು ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಭೇಟಿಗೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಕಡೆ ಆಗಮಿಸಿದ್ದರು ಈ ವೇಳೆ ಘಟನೆ ನಡೆದಿದೆ.ಬಳಿಕ ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.