ಚಿಕ್ಕಮಗಳೂರು: ಅಂಗಡಿ ಎತ್ತಂಗಡಿ ಆಯ್ತು ಈಗ ಮೈಕ್ ಫೈಟ್ ಶುರುವಾಗಿದೆ. ಚಿಕ್ಕಮಗಳೂರಿನಲ್ಲಿ ಮೈಕ್ ತೆರವಿಗೆ ನಿರ್ಧಾರ ಮಾಡಲಾಗಿದ್ದು, ಅನಧಿಕೃತ ಮೈಕ್ ತೆರವಿಗೆ ನಗರಸಭೆ ಡಿಸೈಡ್ ಮಾಡಿದೆ.
ಈ ಬಗ್ಗೆ ನಗರಸಭೆ ಆಡಳಿತ ಬಜೆಟ್ನಲ್ಲೇ ಘೋಷಣೆ ಮಾಡಿದ್ದು, ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮೈಕ್ ತೆರವಿಗೆ ನಿರ್ಧರಿಸಲಾಗಿದೆ. ಹೈಕೋರ್ಟ್ ಆದೇಶ, ನಗರಸಭೆ ಅನುಮತಿ ಇಲ್ಲದಿದ್ರೆ ಮೈಕ್ ತೆರವುಗೊಳಿಸಲಾಗುತ್ತದೆ. ಪ್ರಾರ್ಥನಾ ಮಂದಿಗಳಲ್ಲಿ ಅನಧಿಕೃತ ಮೈಕ್ ಹಾಕಲಾಗಿದ್ದು, ತೆರವಿಗೆ ಮುಂದಾದ್ರೆ ವಿವಾದ ಆಗುತ್ತೆ ಅನ್ನೋ ಹಿನ್ನೆಲೆಯಲ್ಲಿ ಬಜೆಟ್ನಲ್ಲೇ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಈ ವಿಷಯವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ:ರಷ್ಯಾ ಉಕ್ರೇನ್ ಸಮರ.. ರಷ್ಯಾದ 1351 ಸೈನಿಕರ ಸಾವು, 3500ಕ್ಕೂ ಹೆಚ್ಚು ಮಂದಿಗೆ ಗಾಯ..