ಹುಬ್ಬಳ್ಳಿ: ಡ್ರಗ್ ಅಡಿಕ್ಟ್ ಆಗಿದ್ದ ಮಗನ ಕೊಲೆಗೆ ಹುಬ್ಬಳ್ಳಿಯಲ್ಲಿ ಉದ್ಯಮಿ ತಂದೆಯಿಂದಲೇ ಸುಪಾರಿ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮಗ ನಿಖಿಲ ಜೈನ್ ಕೊಲೆಗೆ ತಂದೆ ಭರತ ಜೈನ್ ಸುಫಾರಿ ನೀಡಿದ್ದಾನೆ. ಹುಬ್ಬಳ್ಳಿಯ ಮೂಲದವರೇ ಸುಫಾರಿ ಹತ್ಯೆಯಾಗಿರುವ ಸಾಧ್ಯತೆಯಿದೆ. ಹತ್ಯೆ ಮಾಡಿರುವ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಇನ್ನು ಕೇಶ್ವಾಪುರ ಠಾಣೆ ಪೊಲೀಸರಿಂದ ನಿಖಿಲ ಜೈನ್ ಶವಕ್ಕಾಗಿ ಹುಬ್ಬಳ್ಳಿಯ ದೇವರಗುಡಿಹಾಳದಲ್ಲಿ ಶೋಧಕಾರ್ಯ ಮುಂದುವರೆಸಲಾಗಿದೆ.
ಇದನ್ನೂ ಓದಿ:ಹಾವೇರಿಯ ಗ್ರಾಮ ಪಂಚಾಯತಿಗೂ ಕಾಲಿಟ್ಟ ರೆಸಾರ್ಟ್ ರಾಜಕಾರಣ…!