ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಗಾಗಿ ದೆಹಲಿ ಪೊಲೀಸರು ಭಾನುವಾರ ಗಾಜಿಪುರ, ಸಿಂಗು, ಚಿಲ್ಲಾ ಮತ್ತು ಟಿಕ್ರಿ ಗಡಿಯಿಂದ ನಾಲ್ಕು ಮಾರ್ಗಗಳನ್ನು ಪ್ರಸ್ತಾಪಿಸಿದ್ದಾರೆ.
ದೆಹಲಿ ಪೊಲೀಸರು ನಾಳೆ ರಾಜಧಾನಿಯೊಳಗೆ ಟ್ರಾಕ್ಟರ್ ಪೆರೇಡ್ ನಡೆಸಲು ರೈತರಿಗೆ ಅನುಮತಿ ನೀಡಿದ್ದು, ರಾಜ್‌ಪಾತ್‌ನಲ್ಲಿ ಅಧಿಕೃತ ಮೆರವಣಿಗೆ ಮುಗಿದ ನಂತರವೇ ಪ್ರಾರಂಭವಾಗುತ್ತವೆ ಎಂಬ ಷರತ್ತಿನ ಮೇರೆಗೆ ಅನುಮತಿಯನ್ನು ನೀಡಲಾಗಿದೆ. ಒಪ್ಪಂದದ ಪ್ರಕಾರ ರೈತರು ಗಡಿಯಿಂದ ದೆಹಲಿಯನ್ನು ಪ್ರವೇಶಿಸುತ್ತಾರೆ, ಆದರೆ ಪಕ್ಕದ ಪ್ರದೇಶಗಳಲ್ಲಿಯೇ ಇರುತ್ತಾರೆ ಮತ್ತು ಮಧ್ಯ ದೆಹಲಿಯತ್ತ ಸಾಗುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಮೋದಿ ವಿರುದ್ಧ ಹೇಳಿದ್ದಕ್ಕೆ ಹಂ ಪ ನಾಗರಾಜಯ್ಯ ವಿಚಾರಣೆ ನಡೆಸಿದ್ದ ಪೊಲೀಸರು…! ವ್ಯಾಪಕ ಟೀಕೆಗೆ ಕಾರಣವಾಯ್ತು ಪೊಲೀಸರ ಈ ಕ್ರಮ..!
ಇನ್ನು ಗಣರಾಜ್ಯೋತ್ಸವ ದಿನದ ಟ್ರ್ಯಾಕ್ಟರ್ ರ್ಯಾಲಿಗೆ ದೆಹಲಿಯಲ್ಲಿ ರೈತರ ಅಂತಿಮ ತಯಾರಿ ನಡೆದಿದೆ. ದೆಹಲಿ ಔಟರ್ ರಿಂಗ್ರೋಡ್ನಲ್ಲಿ ಬೃಹತ್ ಱಲಿ ನಡೆಯಲಿದೆ. ರ್ಯಾಲಿ ವೇಳೆ ಯಾರೂ ಯಾವುದೇ ಆಯುಧವನ್ನು ಒಯ್ಯಬಾರದು ಅಥವಾ ಮದ್ಯಪಾನ ಮಾಡಬಾರದು. ಪ್ರಚೋದಿಸುವ ಸಂದೇಶಗಳನ್ನು ಹೊತ್ತ ಬ್ಯಾನರ್‌ಗಳನ್ನು ತರಬಾರದು ಎಂದು ಸಂಘಟಕರು ಸೂಚಿಸಿದ್ದಾರೆ. ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿ ಕೇಂದ್ರಗಳಿಂದ ಮೂರು ಮಾರ್ಗಗಳನ್ನು ಮೆರವಣಿಗೆ ನಡೆಯಲಿದೆ. ಹವಾಮಾನ ಪರಿಗಣಿಸಿ ಜಾಕೆಟ್ ಮತ್ತು ಕಂಬಳಿಗಳನ್ನು ತರಬೇಕು ಎಂದು ಸೂಚಿಸಲಾಗಿದೆ. ರ್ಯಾಲಿಯಲ್ಲಿ ರೈತರ ಹೋರಾಟ, ಧೈರ್ಯ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.