ಕೃಷಿ ಮಸೂದೆ ಜಾರಿ ವಿರೋಧಿಸಿ ದೇಶದ ಅನ್ನದಾತರ ಪ್ರತಿಭಟನೆ ಮುಂದುವರೆದಿದೆ. ಕಳೆದ ಎರಡು ತಿಂಗಳಿಂದ ಹೋರಾಟ ನಡೀತಾ ಇದ್ದು, 11 ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಹೀಗಾಗಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ರಾಜ್ಯದ ರೈತರಿಂದ ರೈತ ಪರೇಡ್ ನಡೆಯಲಿದೆ.
ರೈತ ಹಾಗೂ ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳ ಜಾರಿ ವಿರುದ್ದ ಅನ್ನದಾತರು ನಡೆಸ್ತಾ ಇರೋ ಪ್ರತಿಭಟನೆ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.. ಇದೇ 26 ಗಣರಾಜ್ಯೋತ್ಸವದಂದು ಅನ್ನದಾತರ ಟಾಕ್ಟರ್ ಪೆರೇಡ್ ಹಾಗೂ ರೈತ ಪೆರೇಡ್ ನಡೆಸಲು ತೀರ್ಮಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶದ ಜನರಿಗೆ ಸಂದೇಶ ನೀಡಿದ ಬಳಿಕ ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಆರಂಭವಾಗಲಿದೆ.
ಇದನ್ನೂ ಓದಿ: ಜ. 26 ರಂದು ರಸ್ತೆಗಿಳಿಯುವ ಮುನ್ನ ಎಚ್ಚರ..! ಪ್ರತಿಭಟನೆ ಬಿಸಿ ನಿಮಗೂ ತಟ್ಟಬಹುದು..!
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದ್ವಜಾರೋಹಣ ಹಾಗೂ ನಾಡಿನ ಜನರಿಗೆ ಸಂದೇಶದ ಬಳಿಕ ರೈತ ಪೆರೇಡ್ ಆರಂಭವಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ನೇತತ್ವದಲ್ಲಿ ತುಮಕೂರು ರಸ್ತೆಯ ನೈಸ್ ರೋಡ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ವರೆಗೆ ರೈತ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ. ನೈಸ್ ರೋಡ್ ಜಂಕ್ಷನ್ ನಿಂದ ಸಾವಿರಾರು ರೈತರು ತಮ್ಮ ಟ್ರಾಕ್ಟರ್, ಬಸ್ ಬೈಕ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಪೆರೇಡ್ ಹೊರಡಲಿದ್ದು ಗೊರಗುಂಟೆ ಪಾಳ್ಯ ಸರ್ಕಲ್, ಸರ್ಕಲ್ ದೇವಸ್ಥಾನದ ಮೂಲಕ ಮಲ್ಲೇಶ್ವರಂ. ಆನಂದ ರಾವ್ ಸರ್ಕಲ್ ಮೂಲಕ ಪೆರೇಡ್ ಸಾಗಲಿದ್ದು ಪ್ರತಿ ವಾಹನದ ಮೇಲೂ ರಾಷ್ಟ್ರಧ್ವಜ ರಾಜಾಜಿಸಲಿದೆ.
ಇನ್ನೂ ಐಕ್ಯ ಹೋರಾಟ ಸಮಿತಿಯಿಂದಲೂ ನಗರದಲ್ಲಿ ರೈತ ಪೆರೇಡ್ ನಡೆಯಲಿದೆ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ್ ಕುಮಾರ್, ಐಕ್ಯ ಹೋರಾಟ ಸಮಿತಿಯ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ನಡೆಯಲಿದೆ. ಟ್ರಾಕ್ಟರ್ ರೈತರ ಸಂಕೇತವಾಗಿದ್ದು ಟ್ರಾಕ್ಟರ್ ವರ್ಸಸ್ ಟ್ಯಾಂಕರ್ ಕಾರ್ಯಕ್ರಮ ಇದಾಗಿದೆ.
ಒಟ್ನಲ್ಲಿ ಬೆಂಗಳೂರು ಕೇಂದ್ರೀತ ಹೋರಾಟ ಇದ್ದಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ತಮ್ಮ ವಾಹನಗಳ ಸಮೇತ ಆಗಮಿಸಲಿದ್ದಾರೆ.