ನೆಲಮಂಗಲ: ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ತಮ್ಮ ಸರಳತೆ ಪ್ರಾಮಾಣಿಕತೆಯಿಂದ ಎಲ್ಲರ ಮನಃ ಗೆದ್ದಿದ್ದರು, ಬಡವರಿಗೆ ನೆರವು ಹೀಗೆ ನಾನಾ ರೀತಿಯ ಕೆಲಸಗಳಿಂದ ನಾಡಿನ ಅಭಿಮಾನಿಗಳ ಅಚ್ಚುಮೆಚ್ಚಿನ ಆರಾಧ್ಯ ದೈವರಾಗಿದ್ದಾರೆ. ಇದೀಗ ಪುನೀತ್ ರಾಜ್‍ಕುಮಾರ್ ಫೋಟೋ ಕೂಡ ಹಳ್ಳಿಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರಾರಾಜಿಸುತ್ತಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಲ್ಲಸಂದ್ರ ಗ್ರಾಮದ ಪುರಾತನ ಪ್ರಸಿದ್ಧ ಶ್ರೀ ವೀರಭದ್ರ ಸ್ವಾಮಿ ರಥೋತ್ಸವದ ವೇಳೆ ರಾರಾಜಿಸಿದೆ ಪುನೀತ್ ಭಾವಚಿತ್ರ. ಪುನೀತ್ ರಾಜ್‍ಕುಮಾರ್ ರನ್ನ ದೇವರ ಸಾಲಿನಲ್ಲಿರಿಸಿದ ಗ್ರಾಮಸ್ಥರು ರಥೋತ್ಸವದ ವೇಳೆ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ಸೇವೆಯಿಂದಲೇ ದೇವರಾದ ನಟ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಮನದಲ್ಲಿ ನೆಲೆಸಿರುವುದಕ್ಕೆ ಸಾಕ್ಷಿಯಾಗಿದೆ.