ಮುಂಬೈ: ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು ಹೃದಯಾಘಾತದಿಂದ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಕುಸಿದು ಬಿದ್ದಿದ್ದರು. ನಿರೂಪಕ ಜಯ್ ಭಾನ್ಶುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾಂತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಅಲೇಸಿಯಾ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅಲೇಸಿಯಾ ರಷ್ಯಾ ಮೂಲದವರಾಗಿದ್ದು, ಅವರಿಗೆ ಇದು ಎರಡನೇ ಮದುವೆ ಆಗಿತ್ತು. 2017ರಲ್ಲಿ ಅಲೇಸಿಯಾ ಹಾಗೂ ಸಿದ್ಧಾಂತ್ ಮದುವೆ ಆದರು. 2000-2015ರವರೆಗೆ ಇರಾ ಎಂಬುವವರ ಜತೆ ಸಿದ್ಧಾಂತ್ ಸಂಸಾರ ನಡೆಸಿದ್ದರು. 2001ರಿಂದ ಸಿದ್ಧಾಂತ್ ಅವರು ಕಿರುತೆರೆ ಲೋಕದ ನಂಟು ಹೊಂದಿದ್ದಾರೆ. ‘ಕಸೌಟಿ ಜಿಂದಗಿ ಕೇ’. ‘ಮಮತಾ’, ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಐದು ಗಂಟೆಗಳ ಭೇಟಿ.. ಐದು ಕಾರ್ಯಕ್ರಮ..! ಐಟಿಸಿಟಿ ಬೆಂಗಳೂರಿನಲ್ಲಿ ನಮೋ ಸಂಚಲನ..!